ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

377ನೇ ವಿಧಿ ರದ್ದತಿಗೆ ಹೋರಾಡಿದ್ದವರು ಈಗ ದಂಪತಿ

Last Updated 21 ಜುಲೈ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಒಪ್ಪಿಗೆಯ ಸಲಿಂಗಕಾಮವನ್ನು ಸಹ ಕಾನೂನು ಬಾಹಿರ ಎಂದು ಪ್ರತಿಪಾದಿಸುವ ಸಂವಿಧಾನದ 377ನೇ ವಿಧಿ ರದ್ದುಪಡಿಸಲು ಹೋರಾಟ ನಡೆಸಿದ್ದ ಇಬ್ಬರು ವಕೀಲೆಯರು ವಿವಾಹವಾಗಿದ್ದಾರೆ.

158 ವರ್ಷಗಳಷ್ಟು ಹಳೆಯದಾದ ವಿಧಿಯನ್ನು ರದ್ದುಪಡಿಸುವ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಸೆಪ್ಟೆಂಬರ್ 6, 2018ರಂದು ಪ್ರಕಟಿಸಿತ್ತು. ಈ ವಿಧಿ ರದ್ದುಪಡಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೇನಕಾ ಗುರುಸ್ವಾಮಿ ಹಾಗೂ ಅರುಂಧತಿ ಕಟ್ಜು ಅವರು ಈಗ ದಂಪತಿಯಾಗಿದ್ದಾರೆ.

ಅಂತರರಾಷ್ಟ್ರೀಯ ಮಾಧ್ಯಮದ ಎದುರು ತಮ್ಮ ವಿವಾಹದ ವಿಷಯವನ್ನು ಅವರು ಪ್ರಕಟಿಸಿದ್ದಾರೆ. ‘ಐತಿಹಾಸಿಕ ತೀರ್ಪು ವೃತ್ತಿಪರವಾಗಿ ಮೈಲುಗಲ್ಲು ಎನಿಸಿದ್ದರ ಜೊತೆಗೆ, ವೈಯಕ್ತಿಕವಾಗಿಯೂ ನಮಗೆ ಸಿಕ್ಕಿರುವ ಗೆಲುವು. ನಾವಿಬ್ಬರೂ ನ್ಯಾಯಾಲಯದಲ್ಲಿ ಮಾತ್ರ ಪಾಲುದಾರರಲ್ಲ, ದಂಪತಿಯಾಗಿಯೂ ಕೂಡಾ’ ಎಂದು ಹೇಳಿದ್ದಾರೆ.

2019ರ ಟೈಮ್ ಮ್ಯಾಗಜಿನ್‌ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಇವರಿಬ್ಬರೂ ಸ್ಥಾನ ಪಡೆದಿದ್ದರು. ಮೇನಕಾ ಅವರು ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಎಲ್ಎಲ್‌ಎಂ ಪದವಿ ಪಡೆದ ಬಳಿಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಿ.ಫಿಲ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT