ಜನೌಷಧಿಗಳ ಹೆಸರು ದಪ್ಪಕ್ಷರಗಳಲ್ಲಿ ಬರೆಯಲು ನಿರ್ದೇಶಿಸಿ: ಪಿಐಎಲ್‌

ಗುರುವಾರ , ಏಪ್ರಿಲ್ 25, 2019
31 °C
ದೆಹಲಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಜನೌಷಧಿಗಳ ಹೆಸರು ದಪ್ಪಕ್ಷರಗಳಲ್ಲಿ ಬರೆಯಲು ನಿರ್ದೇಶಿಸಿ: ಪಿಐಎಲ್‌

Published:
Updated:

ನವದೆಹಲಿ: ‘ಔಷಧಿಗಳ ಜೆನೆರಿಕ್‌ ಹೆಸರುಗಳನ್ನು ದಪ್ಪ ಅಕ್ಷರಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ವೈದ್ಯರು ಬರೆದುಕೊಡುವಂತೆ ನಿರ್ದೇಶನ ನೀಡಬೇಕು’ ಎಂದು ಕೋರಿ ದೆಹಲಿಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆಯಾಗಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

ಭಾರತೀಯ ವೈದ್ಯಕೀಯ ಕೌನ್ಸಿಲ್‌ ನಿಯಮಗಳು–2002ರ (ವೃತ್ತಿ, ಶಿಷ್ಟಾಚಾರ ಮತ್ತು ನೈತಿಕತೆ) 1.5ರ ನಿಯಮಗಳ ಪ್ರಕಾರ ವೈದ್ಯರು ಸ್ಪಷ್ಟ ಮತ್ತು ದಪ್ಪ ಅಕ್ಷರಗಳಲ್ಲಿಯೇ ಜನೌಷಧಿಗಳ (ಜೆನೆರಿಕ್‌) ಹೆಸರುಗಳನ್ನು ಬರೆಯಬೇಕು. ಆದರೆ ಈ ನಿಯಮಗಳ ಪಾಲನೆ ಆಗುತ್ತಿಲ್ಲ ಎಂಬ ಅಂಶವನ್ನು ಅರ್ಜಿದಾರರು ಪಿಐಎಲ್‌ನಲ್ಲಿ ಹೇಳಿದ್ದಾರೆ.

ಈ ಸಂಬಂಧ ಎಂಸಿಐ ಮತ್ತು ಕೇಂದ್ರ ಸರ್ಕಾರಕ್ಕೆ ಹಲವು ಮನವಿಗಳನ್ನು ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ವಿಷಯವನ್ನು ಸಂಬಂಧಿಸಿದವರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅರ್ಜಿದಾರರೂ ಆಗಿರುವ ವಕೀಲ ಅಮಿತ್‌ ಸಾಹ್ನಿ ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಜೆನೆರಿಕ್‌ ಔಷಧಿಗಳು ಬ್ರಾಂಡ್‌ ಔಷಧಿಗಳಂತೆಯೇ ಕೆಲಸ ಮಾಡುತ್ತವೆ. ಜೆನೆರಿಕ್‌ ಔಷಧಿಗಳ ಬೆಲೆಯು ಬ್ರಾಂಡೆಡ್‌ ಔಷಧಿಗಳಿಗೆ ಹೋಲಿಕೆ ಮಾಡಿದರೆ ಶೇ 5ರಿಂದ ಶೇ 60ರಷ್ಟು ಕಡಿಮೆ ಇರುತ್ತದೆ. ಆದರೆ ವೈದ್ಯರು ಕೆಲ ಪಟ್ಟಭದ್ರ ಹಿತಾಸಕ್ತಿಯವರ ಹಿತ ಕಾಯುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !