ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರಕ್ಕೆ ಸಿಂಹಪಾಲು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪ್ರಾತಿನಿಧ್ಯ
Last Updated 31 ಮೇ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಸತತ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಜಕೀಯವಾಗಿ ನಿರ್ಣಾಯಕವಾದ ಉತ್ತರಪ್ರದೇಶ ರಾಜ್ಯ ಹೆಚ್ಚಿನ ಪ್ರಾತಿನಿಧ್ಯ ಪಡೆದಿದೆ. ಮೋದಿ ಸೇರಿದಂತೆ ರಾಜ್ಯದ 10 ಮಂದಿ ಸಂಪುಟದಲ್ಲಿದ್ದಾರೆ.

ಉಳಿದಂತೆ ಸಚಿವ ಸಂಪುಟ ಲೋಕಸಭೆಯ 46, ರಾಜ್ಯಸಭೆಯ 11 ಸದಸ್ಯರನ್ನು ಒಳಗೊಂಡಿದೆ. ಒಬ್ಬ ಸಚಿವರು ಸಂಸತ್ತಿನ ಯಾವುದೇ ಸದನದ ಸದಸ್ಯರಲ್ಲ. ಸಂಪುಟಕ್ಕೆ ಸೇರ್ಪಡೆಯಾಗಿರುವ ಮಹಿಳೆಯರ ಸಂಖ್ಯೆ 6.

ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿ ಏಳು ಸಚಿವ ಸ್ಥಾನಗಳನ್ನು ಪಡೆದಿರುವ ಮಹಾರಾಷ್ಟ್ರ, ಆರು ಸ್ಥಾನ ಪಡೆದಿರುವ ಬಿಹಾರ ಇದೆ. ಉತ್ತರಪ್ರದೇಶದಲ್ಲಿ 80 ಲೋಕಸಭೆ ಕ್ಷೇತ್ರಗಳಿದ್ದರೆ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಕ್ರಮವಾಗಿ 48 ಮತ್ತು 40 ಕ್ಷೇತ್ರಗಳಿವೆ.

ಈಚೆಗೆ ನಡೆದ ಚುನಾವಣೆಯಲ್ಲಿ ಗುಜರಾತ್, ರಾಜಸ್ಥಾನ, ಹರಿಯಾಣದಲ್ಲಿಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಒಟ್ಟು 62 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಅಲ್ಲದೆ, ಬಿಜೆಪಿ 303 ಸ್ಥಾನ ಗಳಿಸುವಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಕೊಡುಗೆಯೂ ಸಾಕಷ್ಟಿತ್ತು. 2021 ರಲ್ಲಿಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ 18 ಸ್ಥಾನ ಗೆದ್ದಿದೆ. ಆದರೆ, ಸಂಪುಟದಲ್ಲಿ ಇಬ್ಬರಿಗಷ್ಟೇ ಸ್ಥಾನ ಸಿಕ್ಕಿದೆ.

ಒಡಿಶಾದಲ್ಲಿ ಬಿಜೆಪಿ ಗೆದ್ದಿರುವುದು ಎಂಟು ಸ್ಥಾನ. ಆದರೆ, ಇಬ್ಬರಿಗೆ ಅಂದರೆ ಧರ್ಮೇಂದ್ರ ಪ್ರಧಾನ್‌ ಮತ್ತು ಪ್ರತಾಪ್‌ ಚಂದ್ರ ಸಾರಂಗಿ ಅವರಿಗೆ ಅವಕಾಶ ಸಿಕ್ಕಿದೆ. ರಾಜ್ಯದ ಪ್ರಧಾನ್ ಅವರು ಬಿಹಾರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ಆಂಧ್ರಪ್ರದೇಶ, ನಾಗಲ್ಯಾಂಡ್‌, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾ ಹೊರತುಪಡಿಸಿ ಬಹುತೇಕ ಎಲ್ಲ ರಾಜ್ಯಗಳು ಪ್ರಾತಿನಿಧ್ಯ ಪಡೆದಿವೆ. ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್‌ಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿರುವುದರ ಹಿಂದೆ ಆ ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವುದು ಕಾರಣ ಎನ್ನಲಾಗಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ತಮಿಳುನಾಡಿನ ನಿರ್ಮಲಾ ಸೀತಾರಾಮನ್‌, ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇರಳದ ವಿ.ಮುರಳೀಧರನ್‌ ಅವರು ಸಂಪುಟದಲ್ಲಿದ್ದಾರೆ.

ಸಚಿವೆಯರು: ಸಂಪುಟ ಸೇರಿರುವ ಸಂಸದೆಯರೆಂದರೆ ನಿರ್ಮಲಾ ಸೀತಾರಾಮನ್, ಹರ್‌ ಸಿಮ್ರತ್‌ಕೌರ್‌ ಬಾದಲ್, ಸ್ಮೃತಿ ಇರಾನಿ, ಸಾಧ್ವಿ ನಿರಂಜನ ಜ್ಯೋತಿ, ರೇಣುಕಾ ಸಿಂಗ್, ದೇಬಶ್ರೀ ಚೌಧುರಿ. ಇವರಲ್ಲಿ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯ ಸದಸ್ಯೆ.

ರಾಜ್ಯವಾರು ಪ್ರಾತಿನಿಧ್ಯ

ರಾಜ್ಯ ಒಟ್ಟು ಕ್ಷೇತ್ರ ಸಚಿವರು

ಉತ್ತರ ಪ್ರದೇಶ 80 10

ಮಹಾರಾಷ್ಟ್ರ 48 8

ಬಿಹಾರ 40 5

ಮಧ್ಯಪ್ರದೇಶ 29 5

ಕರ್ನಾಟಕ 28 4

ಗುಜರಾತ್ 26 3

ರಾಜಸ್ಥಾನ 25 3

ಹರಿಯಾಣ 10 3

ಪಶ್ಚಿಮ ಬಂಗಾಳ 42 2

ಒಡಿಶಾ 21 2

ಜಾರ್ಖಂಡ್ 14 2

ಪಂಜಾಬ್‌ 13 2

ದೆಹಲಿ 7 1

ಅರುಣಾಚಲ ಪ್ರದೇಶ 2 1

ಅಸ್ಸಾಂ 14 1

ಛತ್ತೀಸಗಡ 11 1

ಗೋವಾ 2 1

ಹಿಮಾಚಲ ಪ್ರದೇಶ 4 1

ಜಮ್ಮು ಮತ್ತು ಕಾಶ್ಮೀರ 6 1

ತೆಲಂಗಾಣ 17 1

ಉತ್ತರಾಕಂಡ 5 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT