ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಉಡುಗೊರೆಗಳ ಹರಾಜು ಪ್ರಕ್ರಿಯೆಗೆ ಚಾಲನೆ

Last Updated 14 ಸೆಪ್ಟೆಂಬರ್ 2019, 13:24 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ವರ್ಷದಲ್ಲಿ ಲಭಿಸಿದ ಉಡುಗೊರೆಗಳ ಪ್ರದರ್ಶನ ಹಾಗೂ ಇ– ಹರಾಜು ಪ್ರಕ್ರಿಯೆಗೆ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಶನಿವಾರ ಚಾಲನೆ ನೀಡಿದರು.

ಕೇಂದ್ರ ಸರ್ಕಾರದ ನಮಾಮಿ ಗಂಗೆ ಯೋಜನೆಗೆ ಧನ ಸಂಗ್ರಹಕ್ಕಾಗಿ ಉಡುಗೊರೆಗಳನ್ನು ಹರಾಜಿಗೆ ಇರಿಸಲಾಗಿದೆ.

ಶಾಲು, ಜಾಕೆಟ್‌, ಪೇಟಗಳು ಸೇರಿದಂತೆ 2,700 ಕ್ಕೂ ಅಧಿಕ ಸ್ಮರಣಿಕೆಗಳನ್ನು ಇಲ್ಲಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನಲ್ಲಿ ಪ್ರದರ್ಶನಕ್ಕಿರಿಸಿದ್ದು, ಇವುಗಳ ಹರಾಜು ಅಕ್ಟೋಬರ್‌ 3ರ ವರೆಗೆ www.pmmementos.gov.in ವೆಬ್‌ಸೈಟ್‌ ಮೂಲಕ ನಡೆಯಲಿದೆ.

‘ಕನಿಷ್ಠ ₹200 ಹಾಗೂ ಗರಿಷ್ಠ ₹2.5ಲಕ್ಷ ಬೆಲೆಯ ಸ್ಮರಣಿಕೆಗಳನ್ನು ಹರಾಜು ಮಾಡಲಾಗುತ್ತಿದೆ‘ ಎಂದು ಸಚಿವ ಪ್ರಹ್ಲಾದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT