7
ಮುಂಬೈನ ಕಂಡಿವಲಿಯಲ್ಲಿ ಗುರುವಾರ ನಡೆದ ಪ್ರಕರಣ

8 ಮಹಡಿಯಿಂದ ಹಾರಿ ಯುವತಿ ಆತ್ಮಹತ್ಯೆ

Published:
Updated:
ಕಟ್ಟಡದಿಂದ ಜಿಗಿದ ಬಾಲಕಿ

ಮುಂಬೈ: ‘ಇಲ್ಲಿನ ಪಶ್ಚಿಮ ಉಪನಗರ ಕಂಡಿವಿಲಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು, ಕಟ್ಟಡದ 8ನೇ ಮಹಡಿಯಿಂದ ಜಿಗಿದಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ‍ಪೊಲೀಸರು ತಿಳಿಸಿದ್ದಾರೆ.

ಠಾಕೂರ್‌ ಗ್ರಾಮದಲ್ಲಿರುವ ಗಾರ್ಡೇನಿಯಾ ಹೌಸಿಂಗ್‌ ಕೋ ಆಪರೇಟಿವ್‌ ಸೊಸೈಟಿ ಕಟ್ಟಡದಲ್ಲಿ ಗುರುವಾರ ರಾತ್ರಿ ಈ ಪ್ರಕರಣ ನಡೆದಿದೆ.

‘ಇದೇ ಕಟ್ಟಡದ ಐದನೇ ಮಹಡಿಯಲ್ಲಿ ವಾಸವಾಗಿದ್ದ ಹರ್ಷಿಕಾ ಧೀರೇಂದ್ರ ಮಾಯಾವಶಿ ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಅಧಿಕಾರಿಗಳು ತಿಳಿಸಿದರು.

ಎಂಟನೇ ಮಹಡಿಯ ಅಂಚಿನಲ್ಲಿ ನಿಂತಿದ್ದ ಬಾಲಕಿಯನ್ನು ಗಮನಿಸಿದ ನೆರೆಹೊರೆಯ ನಿವಾಸಿಗಳು ಆಕೆಯನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೂ, ಇದಕ್ಕೆ ಕಿವಿಗೊಡದೆ ಅಲ್ಲಿಂದ ಜಿಗಿದಿದ್ದಾಳೆ. ಕೆಳಗೆ ಬೀಳುತ್ತಿದ್ದಂತೆಯೇ, ನೆರವಿಗೆ ಧಾವಿಸಿ ನಿವಾಸಿಗಳು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು, ಬಾಲಕಿಯನ್ನು ಆಸ್ಪತ್ರೆಗೆ ತರುವ ವೇಳೆಯೇ ಕೊನೆಯುಸಿರೆಳೆದಿದ್ದಾಳೆ’ ಘೋಷಿಸಿದರು ಎಂದು ಅವರು ತಿಳಿಸಿದರು.

ಈ ಘಟನೆಯನ್ನು ನೋಡುತ್ತಿದ್ದ ಕೆಲವರು, ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದ್ದಾರೆ. ಇದೀಗ ಈ ದೃಶ್ಯ ವೈರಲ್‌ ಆಗಿದೆ.

‘ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆಕೆಯ ಸಂಬಂಧಿ, ಸ್ನೇಹಿತರ ಬಗ್ಗೆ ವಿಚಾರಣೆ ನಡೆಸಿದ್ದು, ಮೃತ ಬಾಲಕಿಯ ಮೊಬೈಲ್‌ ಫೋನ್‌, ಸಾಮಾಜಿಕ ಜಾಲತಾಣದಲ್ಲಿ ಆಕೆಯ ಚಟುವಟಿಕೆ ಕುರಿತಂತೆ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

 ಸಮತಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !