ಬುಧವಾರ, ಏಪ್ರಿಲ್ 8, 2020
19 °C

ಚೀನಾದಿಂದ ದೆಹಲಿ ತಲುಪಿದ 112 ಮಂದಿ ಭಾರತೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌‌ನಿಂದಾಗಿ ನಲುಗಿರುವ ಚೀನಾದಿಂದ 112 ಮಂದಿ ಭಾರತೀಯರು ಹಾಗೂ 36 ಮಂದಿ ವಿದೇಶಿಯರನ್ನು ಹೊತ್ತು ತಂದ ಭಾರತೀಯ ವಾಯು ಸೇನೆಯ ವಿಮಾನ ಗ್ಲೋಬ್ ಮಾಸ್ಟರ್ ಗುರುವಾರ ಬೆಳಗಿನ ಜಾವ ದೆಹಲಿ ತಲುಪಿದೆ.

ಬೆಳಿಗ್ಗೆ 6.45ಕ್ಕೆ ವಿಮಾನ ದೆಹಲಿ ತಲುಪಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಉಸ್ತುವಾರಿಯಲ್ಲಿ 148 ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಬೆಳಿಗ್ಗೆ ದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಕೊರೊನಾ ವೈರಸ್ ತಪಾಸಣಾ ಕೇಂದ್ರದಲ್ಲಿ  ಎಲ್ಲಾ ರೀತಿಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಭಾರತ-ಟಿಬೆಟ್ ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜಪಾನಿನ ಹಡಗಿನಲ್ಲಿ ಸಿಲುಕಿದ್ದ 119 ಮಂದಿ ಭಾರತೀಯರು ಸ್ವದೇಶಕ್ಕೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು