ಏರ್‌ಪೋರ್ಟ್‌ನಲ್ಲಿ ಮೊಬೈಲ್‌ ಕದ್ದು ಸಿಕ್ಕಿಬಿದ್ದ ಅಧಿಕಾರಿಗಳು!

7

ಏರ್‌ಪೋರ್ಟ್‌ನಲ್ಲಿ ಮೊಬೈಲ್‌ ಕದ್ದು ಸಿಕ್ಕಿಬಿದ್ದ ಅಧಿಕಾರಿಗಳು!

Published:
Updated:

ನವದೆಹಲಿ: ಸರಕು–ಸಾಗಣೆ ವಿಮಾನದಿಂದ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಗೋಏರ್‌ನ ಇಬ್ಬರು ಅಧಿಕಾರಿಗಳನ್ನು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ.

ಪಟ್ನಾದಿಂದ ದೆಹಲಿಗೆ ಬಂದಿದ್ದ ಸರಕು ವಿಮಾನದಿಂದ ಮೊಬೈಲ್‌ಗಳು ಕಳ್ಳತನವಾಗಿರುವ ಬಗ್ಗೆ ಸೆ.19ರಂದು ದೂರು ದಾಖಲಾಗಿತ್ತು.

’ಮೊಬೈಲ್‌ ಇದ್ದ ಬ್ಯಾಗ್‌ ಅನ್ನು ಪಟ್ನಾದಲ್ಲಿ ವಿಮಾನದಲ್ಲಿ ಹಾಕಲಾಗಿತ್ತು. ದೆಹಲಿ ತಲುಪಿದ ನಂತರ ಟ್ರಕ್‌ ಮೂಲಕ ಗೋದಾಮಿಗೆ ಕಳಿಸಲಾಗಿದೆ. ಆಗ 53 ಮೊಬೈಲ್‌ಗಳು ಇದ್ದ ಚೀಲ ನಾಪತ್ತೆಯಾಗಿದೆ. ಇಳಿಸುವ ಸಮಯದಲ್ಲಿಯೇ ಕಳ್ಳತನವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಳ್ಳತನವಾದ ಮೊಬೈಲ್‌ಗಳ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಅವುಗಳನ್ನು ಬಳಕೆ ಮಾಡುತ್ತಿದ್ದ ಸಚಿನ್‌ ಮಾನವಿ ಹಾಗೂ ಸತೀಶ್‌ ಪಾಲ್ ಅವರನ್ನು ನಿಲ್ದಾಣದಲ್ಲಿಯೇ ಬಂಧಿಸಲಾಯಿತು. ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ನಿಲ್ದಾಣದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂಜಯ್ ಭಾಟಿಯಾ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !