ಗೋವಾ: ದಿಢೀರ್‌ ನಾಟಕೀಯ ಬೆಳವಣಿಗೆ, 10 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ

ಶುಕ್ರವಾರ, ಜೂಲೈ 19, 2019
24 °C

ಗೋವಾ: ದಿಢೀರ್‌ ನಾಟಕೀಯ ಬೆಳವಣಿಗೆ, 10 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ

Published:
Updated:
Prajavani

ಪಣಜಿ: ಗೋವಾದಲ್ಲಿ ಬುಧವಾರ ಸಂಜೆ ನಡೆದ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ 15 ಶಾಸಕರಲ್ಲಿ 10 ಮಂದಿ ಬಿಜೆಪಿ ಸೇರಿದ್ದಾರೆ.

ವಿರೋಧ ಪಕ್ಷದ ನಾಯಕ ಚಂದ್ರಕಾಂತ್‌ ಕವಲೇಕರ್‌ ನೇತೃತ್ವದಲ್ಲೇ ಈ ಶಾಸಕರು ಕಾಂಗ್ರೆಸ್‌ ತೊರೆದಿದ್ದಾರೆ.

ವಿಧಾನಸಭೆ ಸ್ಪೀಕರ್‌ ರಾಜೇಶ್‌ ಪಾಟ್ನೇಕರ್‌ ಅವರನ್ನು ಸಂಜೆ ಚಂದ್ರಕಾಂತ್‌ ಅವರ ನೇತೃತ್ವದಲ್ಲಿ ಭೇಟಿಯಾದ ಶಾಸಕರು, ಕಾಂಗ್ರೆಸ್‌ ತ್ಯಜಿಸುವ ನಿರ್ಧಾರ ತಿಳಿಸಿದರು.

10 ಶಾಸಕರು ಪಕ್ಷಾಂತರ ಮಾಡಿರುವುದರಿಂದ ಸದನದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕೇವಲ ಐದಕ್ಕೆ ಇಳಿಯಲಿದೆ.

ಗೋವಾ ವಿಧಾನಸಭೆಯಲ್ಲಿ 17 ಶಾಸಕರನ್ನು ಹೊಂದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. ಮೂವರು ಗೋವಾ ಫಾರ್ವರ್ಡ್‌ ಪಾರ್ಟಿ ಮತ್ತು ಮೂವರು ಪಕ್ಷೇತರರು ಹಾಗೂ ಎನ್‌ಸಿಪಿ ಮತ್ತು ಎಂಜಿಪಿಯ ತಲಾ ಒಬ್ಬ ಶಾಸಕರಿದ್ದಾರೆ.

 ಈ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಚಂದ್ರಕಾಂತ್‌ ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !