ಮನೋಹರ್ ಪರ್ರೀಕರ್ ಗೋವಾ ಮುಖ್ಯಮಂತ್ರಿ ಸ್ಥಾನ ತೊರೆಯುವ ಸಾಧ್ಯತೆ?

7

ಮನೋಹರ್ ಪರ್ರೀಕರ್ ಗೋವಾ ಮುಖ್ಯಮಂತ್ರಿ ಸ್ಥಾನ ತೊರೆಯುವ ಸಾಧ್ಯತೆ?

Published:
Updated:

ಪಣಜಿ: ಕಳೆದ ಏಳು ತಿಂಗಳಿನಿಂದ ಪ್ಯಾಂಕ್ರಿಯಾಟಿಕ್ (ಮೇದೋಜೀರಕ ಗ್ರಂಥಿ) ತೊಂದರೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ತಮ್ಮ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಬೇರೊಬ್ಬರಿಗೆ ನೀಡುವುದರ ಬಗ್ಗೆ ಇಚ್ಛೆ ವ್ಯಕ್ತ ಪಡಿಸಿದ್ದಾರೆ.

ಅಮೆರಿಕದಲ್ಲಿ ಒಂದು ವಾರದ ಚಿಕಿತ್ಸೆ ಪಡೆದು ಸೆಪ್ಟೆಂಬರ್ 6ರಂದು ವಾಪಸ್ ಆದ ಅವರು ಬುಧವಾರ ಇಲ್ಲಿನ ಕಂಡೋಲಿಮ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್‌) ದಾಖಲಾಗಲಿದ್ದಾರೆ. ಶನಿವಾರ ಬೆಳಗ್ಗೆ 11ರ ವೇಳೆಗೆ ಪರ್ರೀಕರ್ ಅವರು ದೆಹಲಿಗೆ ವಿಮಾನ ಮೂಲಕ ತೆರಳಲಿದ್ದಾರೆ.

 ಧವಲೀಕರ್ ಅವರಿಗೆ ಮುಖ್ಯಮಂತ್ರಿ ಜವಾಬ್ದಾರಿ?
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಜತೆ  ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಪರ್ರೀಕರ್ ಅವರ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ನಿರ್ವಹಿಸುವ ಹೊಣೆಯನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಬಿಜೆಪಿ ವೀಕ್ಷಕ ವಿಜಯ್ ಪುರಾಣಿಕ್ ಮತ್ತು ಸಂಯೋಜಕ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಸೋಮವಾರ ಗೋವಾಗೆ ಕಳಿಸಲು ಬಿಜೆಪಿ ತೀರ್ಮಾನಿಸಿದೆ. ಅದೇ ಪೇಳೆ ಪಕ್ಷದ  ಹಿರಿಯ ಕಾರ್ಯಕಾರೀ ಸದಸ್ಯರು ಮುಂದಿನ ಚರ್ಚೆಗಾಗಿ ಗೋವಾಗೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬಲ್ಲಮೂಲಗಳ ಪ್ರಕಾರ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ  (ಎಂಜಿಪಿ) ಸುದಿನ್ ಧವಲೀಕರ್ ಅವರಿಗೆ ತಾತ್ಕಾಲಿಕವಾಗಿ (18 ತಿಂಗಳು)  ಮುಖ್ಯಮಂತ್ರಿ ಜವಾಬ್ದಾರಿಯನ್ನು ನೀಡುವ ಸಾಧ್ಯತೆ  ಇದೆ. ಧವಲೀಕರ್ ಅವರಿಗೆ ಜವಾಬ್ದಾರಿ ನೀಡುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಬಿಜೆಪಿ ಪಕ್ಷದ ವೀಕ್ಷಕರು ಇಲ್ಲಿನ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಸೋಮವಾರ ಭೇಟಿ ಮಾಡಿದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !