ಅನಾರೋಗ್ಯದಲ್ಲೂ ಪರ್ರೀಕರ್‌ ಕರ್ತವ್ಯ; ನಾಯಕತ್ವ ಬದಲಾವಣೆ ಅವಶ್ಯ: ಕೇಂದ್ರ ಸಚಿವ

7

ಅನಾರೋಗ್ಯದಲ್ಲೂ ಪರ್ರೀಕರ್‌ ಕರ್ತವ್ಯ; ನಾಯಕತ್ವ ಬದಲಾವಣೆ ಅವಶ್ಯ: ಕೇಂದ್ರ ಸಚಿವ

Published:
Updated:

ಪಣಜಿ: ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌, ಗೋವಾದಲ್ಲಿ ನಾಯಕತ್ವದ ಬದಲಾವಣೆ ಅವಶ್ಯಕ ಎಂದಿದ್ದಾರೆ. 

ಪಿತ್ತಜನಕಾಂಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮುಖ್ಯಮಂತ್ರಿ ಮನೋಹರ್ ಪರ್ರೀಕರ್‌ ಅವರು ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ನವದೆಹಲಿಯ ಏಮ್ಸ್‌ನಿಂದ ಅಕ್ಟೋಬರ್‌ 14ರಂದು ಗೋವಾಕ್ಕೆ ಮರಳಿದ್ದಾರೆ. 

ಅಂತರರಾಷ್ಟ್ರೀಯ ಯೋಗ ದಿನದ ಕುರಿತು ಪ್ರಕಟಣೆಗಾಗಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ನಾಯಕ್‌, ’ಇಂದು ಅಥವಾ ನಾಳೆ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಮಾಡಬೇಕಾಗುತ್ತದೆ. ಅದು ಅವಶ್ಯಕವೂ ಆಗಿದೆ. ನಿಮಗೆಲ್ಲ ತಿಳಿದಿರುವಂತೆ ಮುಖ್ಯಮಂತ್ರಿ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು. 

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಆಗಾಗ್ಗೆ ಕೇಳಿ ಬರುತ್ತಿದ್ದರೂ, ಬಿಜೆಪಿ ಈವರೆಗೂ ಅದನ್ನು ಅಲ್ಲಗಳೆದಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !