ಗೋಡ್ಸೆ ಜನ್ಮದಿನ ಆಚರಣೆ: ಎಂಟು ಮಂದಿ ಬಂಧನ

ಮಂಗಳವಾರ, ಜೂನ್ 18, 2019
23 °C

ಗೋಡ್ಸೆ ಜನ್ಮದಿನ ಆಚರಣೆ: ಎಂಟು ಮಂದಿ ಬಂಧನ

Published:
Updated:

ಅಹಮದಾಬಾದ್‌: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯ ಜನ್ಮದಿನ ಆಚರಿಸಿದ ಎಂಟು ಮಂದಿಯನ್ನು ಸೂರತ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಈ ಎಂಟು ಜನ ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರಾಗಿದ್ದು, ಗೋಡ್ಸೆ 109ನೇ ಜನ್ಮದಿನ ನಿಮಿತ್ತ ಭಾನುವಾರ ಸಂಜೆ ಸಾರ್ವಜನಿಕರಿಗೆ ಸಿಹಿ ಹಂಚಿದ್ದರು. ಅಲ್ಲದೆ, ದೇಗುಲವೊಂದರಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಗೋಡ್ಸೆ ಭಾವಚಿತ್ರದ ಸುತ್ತ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದರು. 

ಬಂಧಿತರನ್ನು ಹಿರೇನ್‌ ಮಶ್ರು, ವಾಲಾ ಭಾರ್ವದ್‌, ವಿರಳ್‌ ಮಾಲ್ವಿ, ಹಿತೇಶ್‌ ಸೊನಾರಾ, ಮನೀಶ್‌ ಕಲಾ ಮತ್ತು ಯೋಗೇಶ್‌ ಪಟೇಲ್‌ ಎಂದು ಗುರುತಿಸಲಾಗಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ. ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಸೂರತ್‌ ಪೊಲೀಸರು ತಿಳಿಸಿದ್ದಾರೆ. 

 ‘ಹಂತಕ ಗೋಡ್ಸೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹೊಗಳುತ್ತಿವೆ. ಇದರಿಂದ ಉತ್ತೇಜಿತರಾದ ಭಾರತೀಯ ಹಿಂದೂ ಮಹಾಸಭಾದ ಕಾರ್ಯಕರ್ತರು ಗೋಡ್ಸೆ ಜನ್ಮದಿನ ಆಚರಿಸಿದ್ದಾರೆ’ ಎಂದು ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಅಮಿತ್‌ ಚಾವ್ಡಾ ಟ್ವೀಟ್‌ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !