ಸೋಮವಾರ, ಡಿಸೆಂಬರ್ 9, 2019
17 °C
ತೆರಿಗೆದಾರರ ಅನನುಕೂಲತೆ ತಪ್ಪಿಸಲು ಕ್ರಮ

ಪಾನ್–ಆಧಾರ್ ಜೋಡಣೆ ಗಡುವು ಮತ್ತೆ ವಿಸ್ತರಣೆ: ಡಿಸೆಂಬರ್ 31ಕ್ಕೆ ಹೊಸ ಡೆಡ್‌ಲೈನ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಆಧಾರ್ ಕಾರ್ಡ್‌ ಜತೆ ಪಾನ್ ಕಾರ್ಡ್‌ ಜೋಡಣೆ ಮಾಡಲು ನಿಗದಿಪಡಿಸಿರುವ ಗಡುವನ್ನು ಸರ್ಕಾರ ಮತ್ತೆ ವಿಸ್ತರಿಸಿದೆ. ಡಿಸೆಂಬರ್ 31ಕ್ಕೆ ಹೊಸ ಡೆಡ್‌ಲೈನ್ ನಿಗದಿಪಡಿಸಿ ಹಣಕಾಸು ಸಚಿವಾಲಯ, ನೇರ ತೆರಿಗೆ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಶನಿವಾರ ಅಧಿಸೂಚನೆ ಹೊರಡಿಸಿವೆ.

ಪಾನ್–ಆಧಾರ್ ಜೋಡಣೆಗೆ ಸೆಪ್ಟೆಂಬರ್ 30ಕ್ಕೆ ಕೊನೆಯ ದಿನವೆಂದು ಈ ಹಿಂದೆ ಸರ್ಕಾರ ಅಧಿಸೂಚನೆ ಕಳುಹಿಸಿತ್ತು. ಅದಕ್ಕೂ ಮುನ್ನ ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿತ್ತು. ಗಡುವಿಗೂ ಮುನ್ನ ಜೋಡಣೆ ಮಾಡದಿದ್ದರೆ ಅಕ್ಟೋಬರ್ 1ರಿಂದ ಪಾನ್‌ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇತ್ತು.

‘2019ರ ಹಣಕಾಸು ಕಾಯ್ದೆಗೆ (ನಂ.2) ಈಚೆಗೆ ತರಲಾದ ತಿದ್ದುಪಡಿ ಪ್ರಕಾರ, ಆಧಾರ್ ಜತೆ ಜೋಡಣೆ ಮಾಡದ ಪಾನ್‌ ಕಾರ್ಡ್‌ ನಿಷ್ಕ್ರಿಯಗೊಳ್ಳಬೇಕಿತ್ತು. ಹೀಗಾದರೆ ನಂತರ ತೆರಿಗೆದಾರರು ಪಾನ್‌ ಕಾರ್ಡ್‌ ಅನ್ನು ಉಲ್ಲೇಖಿಸುವಂತಿಲ್ಲ. ನಿಷ್ಕ್ರಿಯಗೊಂಡ ಪಾನ್ ಅನ್ನು ಮರಳಿ ಕಾರ್ಯಗತಗೊಳಿಸುವ ವಿಧಾನವನ್ನು ಇನ್ನೂ ಇಲಾಖೆ ಸೂಚಿಸಿಲ್ಲ. ಹೀಗಾಗಿ ತೆರಿಗೆದಾರರಿಗೆ ಆಗುವ ಅನನುಕೂಲತೆ ತಪ್ಪಿಸುವ ನಿಟ್ಟಿನಲ್ಲಿ ಜೋಡಣೆಯ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ’ ಎಂದು ಟ್ಯಾಕ್ಸ್‌ಮನ್ ಉಪ ಮಹಾ ಪ್ರಬಂಧಕ ನವೀನ್ ವಧ್ವಾ ತಿಳಿಸಿದ್ದಾರೆ.

ಇನ್ನಷ್ಟು...

ಪಾನ್‌–ಆಧಾರ್‌ ಜೋಡಣೆಗೆ ಸೆ.30 ಕೊನೇ ದಿನ; ಲಿಂಕ್‌ ಮಾಡುವುದು ಹೇಗೆ?ಇಲ್ಲಿದೆ ವಿವರ

ಮಾಸಾಶನ ಪಡೆಯಲು ಆಧಾರ್‌ ಕಡ್ಡಾಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು