ಭಾನುವಾರ, ಆಗಸ್ಟ್ 18, 2019
26 °C

ಬಾಹ್ಯಾಕಾಶ ಯಾನದ ಪಿತಾಮಹ ಡಾ.ವಿಕ್ರಂ ಸಾರಾಭಾಯಿಗೆ ‘ಗೂಗಲ್ ಡೂಡಲ್’ ಗೌರವ

Published:
Updated:

ನವದೆಹಲಿ: ಭಾರತದ ಬಾಹ್ಯಾಕಾಶ ಯಾನದ ಪಿತಾಮಹ ಡಾ.ವಿಕ್ರಂ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ  ಸೋಮವಾರ ಗೂಗಲ್‌ ಸಂಸ್ಥೆ ವಿಶೇಷವಾದ ಡೂಡಲ್‌ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ. 

ಸಾರಾಭಾಯಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾತ್ರವಲ್ಲ; ಔಷದೋದ್ಯಮ, ಪರಮಾಣು ಶಕ್ತಿ, ಜವಳಿ ಉದ್ಯಮ, ಆಡಳಿತ ನಿರ್ವಹಣೆ, ಲಲಿತಕಲೆ ಇತ್ಯಾದಿ ಕ್ಷೇತ್ರಗಳಲ್ಲೂ ಕೈಯಾಡಿಸಿದ ಸಾಹಸಿ. ಅವರೀಗ ನಮ್ಮೊಡನೆ ಇದ್ದಿದ್ದರೆ ಇಂದಿಗೆ (ಆಗಸ್ಟ್ 12) ನೂರು ವಸಂತಗಳನ್ನು ಪೂರೈಸುತ್ತಿದ್ದರು. 

ಸಾರಾಭಾಯಿ ಅವರಿಗೆ 1962ರಲ್ಲಿ ಶಾಂತಿ ಸ್ವರೂಪ್‌ ಪ್ರಶಸ್ತಿ, 1966ರಲ್ಲಿ ಪದ್ಮ ಭೂಷಣ, 1972ರಲ್ಲಿ ವಿಭೂಷಣ ಪ್ರಶಸ್ತಿಗಳು ‌ಲಭಿಸಿವೆ.

ಸಾರಾಭಾಯಿ ಜನ್ಮಶತಮಾನೋತ್ಸವ ನಿಮಿತ್ತ ವಿಶೇಷ ಲೇಖನ: ಸಾರಾಭಾಯಿ ಶತಕ 

Post Comments (+)