ನ್ಯಾಯಾಲಯದಲ್ಲೇ ರೌಡಿ ಹಾವಳಿ!

7

ನ್ಯಾಯಾಲಯದಲ್ಲೇ ರೌಡಿ ಹಾವಳಿ!

Published:
Updated:

ಶಿವಗಂಗಾ, ತಮಿಳುನಾಡು: ಕುಡುಗೋಲು ಝಳಪಿಸುತ್ತ ಇಲ್ಲಿನ ನ್ಯಾಯಾಲಯಕ್ಕೆ ನುಗ್ಗಿದ ರೌಡಿಯೊಬ್ಬ ಮುಖ್ಯ ಜ್ಯೂಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕುರ್ಚಿ ಮೇಲೆಯೇ ಕುಳಿತು ಘೋಷಣೆ ಹಾಕಿದ ಪ್ರಸಂಗ ನಡೆದಿದೆ.

ಈತನ ಕೃತ್ಯದಿಂದ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಈತನನ್ನು ಮುನಿಸ್ವಾಮಿ ಎಂದು ಗುರುತಿಸಲಾಗಿದೆ. ರೌಡಿ ಕೃತ್ಯಗಳಿಗಾಗಿ ಬಂಧಿಸಲಾಗಿದ್ದ ಈತ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.

ಸೋಮವಾರ ಈ ಘಟನೆ ನಡೆದಿದ್ದು, ನ್ಯಾಯಾಲಯಕ್ಕೆ ನುಗ್ಗುವ ಮುನ್ನ ಈತ ದೇವಸ್ಥಾನ ಪ್ರವೇಶಿಸಿದ್ದ. ಅಲ್ಲಿನ ಭಕ್ತಾದಿಗಳಿಗೆ ಕುಡುಗೋಲು ತೋರಿಸಿ ಹೆದರಿಸಿದ್ದ. ಬಳಿಕ ನ್ಯಾಯಾಲಯಕ್ಕೆ ನುಗ್ಗಿದ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ದೊರೆತು ಸ್ಥಳಕ್ಕೆ ಧಾವಿಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !