ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಗೆಲ್ಲುವುದರಿಂದ ಯಾರೂ ದೋಷಮುಕ್ತರಾಗುವುದಿಲ್ಲ: ಉಮಾ ಭಾರತಿ

Last Updated 25 ಅಕ್ಟೋಬರ್ 2019, 13:42 IST
ಅಕ್ಷರ ಗಾತ್ರ

ನವದೆಹಲಿ:ಬಿಜೆಪಿ ಸದಾಚಾರದ ಬುನಾದಿಯನ್ನು ಮರೆಯಬಾರದು ಎಂದು ನಾನು ವಿನಂತಿಸುತ್ತಿದ್ದೇನೆ-ಹೀಗೆ ಟ್ವೀಟ್ ಮಾಡಿದ್ದು ಬಿಜೆಪಿ ನಾಯಕಿ ಉಮಾ ಭಾರತಿ.

ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಗೋಪಾಲ್ ಕಾಂಡಾ ಅವರ ಬೆಂಬಲವನ್ನು ಪಡೆದಿದ್ದು, ಈ ಬಗ್ಗೆ ಉಮಾ ಭಾರತಿ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿಗೆ ಹಿತೋಪದೇಶ ನೀಡಿದ್ದಾರೆ.

2012 ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ 53ರ ಹರೆಯದ ಗೋಪಾಲ್ ಕಾಂಡಾ. ಗೀತಿಕಾ ಶರ್ಮಾ ಆತ್ಮಹತ್ಯಾ ಟಿಪ್ಪಣಿಯಲ್ಲಿ ಕಾಂಡಾ ಹೆಸರು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಕಾಂಡಾ ಜಾಮೀನು ಪಡೆದು ಹೊರ ಬಂದಿದ್ದರು.

ಹರಿಯಾಣ ಸರ್ಕಾರದಲ್ಲಿ ಕಾಂಡಾ ಅವರನ್ನು ಸೇರ್ಪಡೆ ಮಾಡಿದ್ದಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಟ್ವೀಟಿಸಿದ ಉಮಾಭಾರತಿ,ಯುವತಿಯೊಬ್ಬಳ ಆತ್ಮಹತ್ಯೆಗೆ ಕಾರಣವಾದ ವ್ಯಕ್ತಿ ಇದೇ ಕಾಂಡಾ ಆಗಿದ್ದರೆ, ಯುವತಿಯ ಅಮ್ಮನ ಆತ್ಮಹತ್ಯೆ ಪ್ರಕರಣದಲ್ಲಿಯೂ ಅವರು ಆರೋಪ ಎದುರಿಸುತ್ತಿದ್ದಾರೆ. ಆವರು ನಿರಪರಾಧಿ ಅಥವಾ ತಪ್ಪಿತಸ್ಥನೇ ಆಗಿರಲಿ ಅದನ್ನು ತೀರ್ಮಾನಿಸುವುದು ಕಾನೂನು. ಚುನಾವಣೆ ಗೆಲ್ಲುವುದರಿಂದ ಅವರು ದೋಷಮುಕ್ತರಾಗುವುದಿಲ್ಲ. ಚುನಾವಣೆ ಗೆಲುವಿಗೆ ಹಲವಾರು ಕಾರಣಗಳಿರುತ್ತವೆ ಎಂದಿದ್ದಾರೆ.

ಬಿಜೆಪಿ ತನ್ನ ನೈತಿಕತೆಯ ಬುನಾದಿಯನ್ನು ಮರೆಯಬಾರದು. ನಮ್ಮಲ್ಲಿ ನರೇಂದ್ರ ಮೋದಿಯಂತ ಶಕ್ತಿ ಇದೆ. ಇಡೀ ದೇಶ ಮಾತ್ರವಲ್ಲ ಇಡೀ ಜಗತ್ತೇ ಮೋದಿ ಜತೆ ಇದೆ.ನಮ್ಮ ಜತೆ ಇರುವವರು ಎಲ್ಲರೂ ದೋಷಮುಕ್ತರು ಎಂಬುದನ್ನು ಖಾತರಿ ಪಡಿಸಬೇಕಿದೆ ಎಂದು ಉಮಾ ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಯುವತಿ ಆತ್ಮಹತ್ಯೆಗೆ ಮಾನಸಿಕ ಹಿಂಸೆ ಆರೋಪ:ಹರಿಯಾಣ ಸಚಿವರ ವಿರುದ್ಧ ಪ್ರಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT