ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌–2019: ಏರ್‌ ಇಂಡಿಯಾಕ್ಕೆ ₹3,900 ಕೋಟಿ ಅನುದಾನ

Last Updated 1 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಕ್ಕೆ ಬಜೆಟ್‌ನಲ್ಲಿ ₹3900 ಕೋಟಿ ನೀಡಲಾಗಿದೆ. ಸಾಲದ ಸುಳಿಯಲ್ಲಿರುವ ಸಂಸ್ಥೆಯ ಹಣಕಾಸು ಪುನರ್ ರಚನೆಗಾಗಿ ‘ಏರ್‌ ಇಂಡಿಯಾ ಅಸೆಟ್‌ ಹೋಲ್ಡಿಂಗ್‌ ಲಿ’ ಅನ್ನು ರಚಿಸಲಾಗಿದೆ.

ಏರ್ ಇಂಡಿಯಾಕ್ಕೆ ಈ ಹಣಕಾಸು ವರ್ಷದಲ್ಲಿ ₹1300 ಕೋಟಿಯನ್ನು ನೀಡಲಾಗುವುದು ಹಾಗೂ ಮುಂದಿನ ಹಣಕಾಸು ವರ್ಷದಲ್ಲಿ ₹2,600 ಕೋಟಿ ಒದಗಿಸಲಾಗುವುದು.

ಸದ್ಯ ಏರ್ ಇಂಡಿಯಾವು ₹55 ಸಾವಿರ ಕೋಟಿ ಸಾಲದ ಹೊರೆಯನ್ನು ಅನುಭವಿಸುತ್ತಿದೆ.

2016–17 ನೇ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾದ ಸಾಲದ ಪ್ರಮಾಣ ₹47 ಸಾವಿರ ಕೋಟಿಯಷ್ಟಿತ್ತು. ಹೆಚ್ಚುತ್ತಿರುವ ಸಾಲದ ಬಡ್ಡಿ ಪ್ರಮಾಣ ಮತ್ತು ಇತರೆ ವಿಮಾನಯಾನ ಸಂಸ್ಥೆಗಳಿಂದ ತೀವ್ರ ಸ್ಪರ್ಧೆ ಎದುರಾಗಿದ್ದು ಸಂಸ್ಥೆಯ ಸಾಲವನ್ನು ಇನ್ನಷ್ಟು ಹೆಚ್ಚಿಸಿತು.

ಅತಿಗಣ್ಯರ ಪ್ರಯಾಣಕ್ಕಾಗಿ ವಿಮಾನಗಳ ಖರೀದಿಗಾಗಿ ₹1,048 ಕೋಟಿ ನೀಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. 2019–20 ನೇ ಸಾಲಿನಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ₹4,500 ಕೋಟಿ ನೀಡಲಾಗುತ್ತದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT