ಭಾನುವಾರ, ಮೇ 31, 2020
27 °C

ಕೇಂದ್ರೀಯ ತನಿಖಾ ದಳಕ್ಕೆ ಐವರು ಜಂಟಿ ನಿರ್ದೇಶಕರ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹೊಸದಾಗಿ ಐವರು ಜಂಟಿ ನಿರ್ದೇಶಕರನ್ನು ಕೇಂದ್ರ ಸರ್ಕಾರ ನೇಮಕಾತಿ ಮಾಡಿದೆ.

ಐಪಿಎಸ್‌ ಅಧಿಕಾರಿಗಳಾದ ಸಂಪತ್‌ ಮೀನಾ, ಅನುರಾಗ್‌, ರಾಕೇಶ್‌ ಅಗರ್‌ವಾಲ್‌, ವಿಯೋಲಸ್ ಕುಮಾರ್ ಚೌಧರಿ ಮತ್ತು ಡಿ.ಸಿ.ಜೈನ್‌ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ.

ಐವರು ಅಧಿಕಾರಿಗಳ ಪೈಕಿ ಅನುರಾಗ್‌, ಅಗರ್‌ವಾಲ್‌ ಮತ್ತು ಜೈನ್‌ ಈ ಮೊದಲು ಸಿಬಿಐನಲ್ಲಿ ಎಸ್‌ಪಿ, ಡಿಐಜಿ ಮಟ್ಟದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.

ಮೀನಾ, ಅನುರಾಗ್‌, ಅಗರ್‌ವಾಲ್‌ ಅವರು ಜಾರ್ಖಂಡ್‌, ತ್ರಿಪುರ ಮತ್ತು ಹಿಮಾಚಲಪ್ರದೇಶ ಕೇಡರ್‌ನ 1994ರ ಬ್ಯಾಚಿನ ಅಧಿಕಾರಿಗಳಾಗಿದ್ದಾರೆ. ಜೈನ್‌ ಅವರು ರಾಜಸ್ತಾನ ಕೇಡರ್‌ನ 1991ರ ಬ್ಯಾಚ್‌ ಹಾಗೂ ಚೌಧರಿ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್‌ನ 1997ನೇ ಬ್ಯಾಚಿನ ಅಧಿಕಾರಿಯಾಗಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು