ಚೀನಾದಿಂದ ಹಾಲಿನ ಉತ್ಪನ್ನ ಆಮದು ನಿರ್ಬಂಧ ವಿಸ್ತರಣೆ

7
ವಿಷಕಾರಿ ರಾಸಾಯನಿಕ ಇರುವ ಶಂಕೆ

ಚೀನಾದಿಂದ ಹಾಲಿನ ಉತ್ಪನ್ನ ಆಮದು ನಿರ್ಬಂಧ ವಿಸ್ತರಣೆ

Published:
Updated:

ನವದೆಹಲಿ: ಚೀನಾದಿಂದ ಹಾಲು ಹಾಗೂ ಅದರ ಉತ್ಪನ್ನಗಳ ಆಮದು ಮೇಲಿನ ನಿರ್ಬಂಧವನ್ನು ಭಾರತ ಆರು ತಿಂಗಳು ವಿಸ್ತರಿಸಿದೆ.

ಚಾಕೋಲೆಟ್, ಚಾಕೋಲೆಟ್ ಉತ್ಪನ್ನಗಳು, ಕ್ಯಾಂಡಿ ಇದರಲ್ಲಿ ಸೇರಿವೆ. ಡಿಸೆಂಬರ್ 23ರವರೆಗೂ ನಿರ್ಬಂಧ ಮುಂದುವರಿಯಲಿದೆ. ಸೆಸ್ಟೆಂಬರ್ 2008ರಲ್ಲಿ ನಿರ್ಬಂಧ ಮೊದಲಿಗೆ ಜಾರಿಯಾಗಿತ್ತು. ಕಾಲಕಾಲಕ್ಕೆ ಅದು ವಿಸ್ತರಣೆಯಾಗುತ್ತಿದೆ. 

ಕಾರಣವೇನು?: ಚೀನಾದ ಹಾಲಿನ ಉತ್ಪನ್ನಗಳಲ್ಲಿ ಮೆಲಮೈನ್ ಅಂಶ ಇದೆ ಎಂಬ ಆತಂಕದಿಂದ ನಿಷೇಧ ವಿಧಿಸಲಾಗಿದೆ. ಇದು ವಿಷಕಾರಿ ರಾಸಾಯನಿಕವಾಗಿದ್ದು, ಪ್ಲಾಸ್ಟಿಕ್ ಹಾಗೂ ರಸಗೊಬ್ಬರ ತಯಾರಿಕೆಯಲ್ಲಿ ಬಳಸಲಾಗಿತ್ತದೆ.

ಭಾರತವು ಚೀನಾದಿಂದ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಿಲ್ಲವಾದರೂ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.  

ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಹಾಲು ಉತ್ಪಾದಿಸುವ ಹಾಗೂ ಬಳಕೆ ಮಾಡುವ ದೇಶ. ಪ್ರತಿ ವರ್ಷ ಇಲ್ಲಿ 15 ಕೋಟಿ ಟನ್ ಹಾಲು ಉತ್ಪಾದಿಸಲಾಗುತ್ತದೆ. ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್‌ ರಾಜ್ಯಗಳು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !