ಜಾಹೀರಾತಿಗೆ ₹5,200 ಕೋಟಿ ಖರ್ಚು ಮಾಡಿದ ಕೇಂದ್ರ ಸರ್ಕಾರ

7
2014–15ರಿಂದ ಇದುವರೆಗೆ ವಿನಿಯೋಗ

ಜಾಹೀರಾತಿಗೆ ₹5,200 ಕೋಟಿ ಖರ್ಚು ಮಾಡಿದ ಕೇಂದ್ರ ಸರ್ಕಾರ

Published:
Updated:

ನವದೆಹಲಿ: ಕೇಂದ್ರ ಸರ್ಕಾರವು 2014–15ರಿಂದ ಇದುವರೆಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ₹5,200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್‌ ರಾಥೋಡ್‌ ಗುರುವಾರ ಹೇಳಿದ್ದಾರೆ.

2014–15ರಲ್ಲಿ ₹979 ಕೋಟಿ, 2015–16ರಲ್ಲಿ ₹1,160 ಕೋಟಿ, 2016–17ರಲ್ಲಿ ₹1,264 ಕೋಟಿ ಹಾಗೂ 2017 –18ರಲ್ಲಿ ₹ 1,313 ಕೋಟಿ, 2018–19ರಲ್ಲಿ ಡಿಸೆಂಬರ್‌ ವರೆಗೆ ₹527 ಕೋಟಿ ಹಣವನ್ನು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಖರ್ಚು ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಅವರು ತಿಳಿಸಿದ್ದಾರೆ.

ಪ್ರವಾಹ: 85ಸಾವಿರ ಕೋಟಿ ನಷ್ಟ

2015 ರಿಂದ 17ರ ವರೆಗೆ 10 ಕೋಟಿ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದು, ₹85,673 ಕೋಟಿಯ ನಷ್ಟ ಸಂಭವಿಸಿದೆ ಎಂದು ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಅರ್ಜುನ್ ರಾಮ್ ಮೆಗ್ವಾಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಪ್ರವಾಹದ ಕಾರಣ ಈ ಅವಧಿಯಲ್ಲಿ 4,902 ಜನರು ಮೃತಪಟ್ಟಿದ್ದಾರೆ.  82,146 ಜಾನುವಾರುಗಳು ಸಾವನ್ನಪ್ಪಿವೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !