ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಹಾದಿಗೆ ಸನ್‌ರೈಸರ್ಸ್‌

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಮಧ್ಯಮ ವೇಗದ ಬೌಲರ್‌ ಸಿದ್ದಾರ್ಥ್‌ ಕೌಲ್‌ (23ಕ್ಕೆ3) ಮತ್ತು ಬಸಿಲ್‌ ಥಂಪಿ (4ಕ್ಕೆ2) ಮಂಗಳವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಇವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಪಂದ್ಯದಲ್ಲಿ 31ರನ್‌ಗಳಿಂದ ಗೆದ್ದಿತು.  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೇನ್‌ ವಿಲಿಯಮ್ಸನ್‌ ಸಾರಥ್ಯದ ಸನ್‌ರೈಸರ್ಸ್‌ ತಂಡವು 20 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್‌ ಆಯಿತು.ರೋಹಿತ್‌ ಶರ್ಮಾ ಪಡೆ 18.5 ಓವರ್‌ಗಳಲ್ಲಿ 87ರನ್‌ ಗಳಿಸಿ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರು: ಸನ್‌ರೈಸರ್ಸ್‌ ಹೈದರಾಬಾದ್: 18.4 ಓವರ್‌ಗಳಲ್ಲಿ 118 (ಕೇನ್ ವಿಲಿಯಮ್ಸನ್ 29, ಮನೀಷ್ ಪಾಂಡೆ 16, ಯೂಸುಫ್ ಪಠಾಣ್ 29, ಮೊಹಮ್ಮದ್ ನಬಿ 14, ಜಸ್‌ಪ್ರೀತ್ ಬೂಮ್ರಾ 25ಕ್ಕೆ1, ಮೆಕಲೆನಾಗನ್ 22ಕ್ಕೆ2, ಹಾರ್ದಿಕ್ ಪಾಂಡ್ಯ 20ಕ್ಕೆ2, ಮುಸ್ತಫಿಜರ್ ರೆಹಮಾನ್ 18ಕ್ಕೆ1, ಮಯಂಕ್ ಮಾರ್ಕಂಡೆ 15ಕ್ಕೆ2). ಮುಂಬೈ ಇಂಡಿಯನ್ಸ್‌: 18.5 ಓವರ್‌ಗಳಲ್ಲಿ 87 (ಸೂರ್ಯಕುಮಾರ್‌ 34, ಕೃಣಾಲ್‌ ಪಾಂಡ್ಯ 24 ; ಸಂದೀಪ್‌ ಶರ್ಮಾ 9ಕ್ಕೆ1, ಸಿದ್ದಾರ್ಥ್‌ ಕೌಲ್‌ 23ಕ್ಕೆ3, ರಶೀದ್‌ ಖಾನ್‌ 11ಕ್ಕೆ2, ಬಸಿಲ್‌ ಥಂಪಿ 4ಕ್ಕೆ2).ಫಲಿ ತಾಂಶ: ಸನ್‌ ರೈಸರ್ಸ್‌ಗೆ 31ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT