ಬುಧವಾರ, ನವೆಂಬರ್ 13, 2019
17 °C
ರಜತ್‌ ಶರ್ಮಾ, ಪ್ರಸೂನ್‌ ಜೋಶಿ ಸದಸ್ಯರಾಗಿ ನೇಮಕ

ಎನ್‌ಎಂಎಂಎಲ್‌ನಿಂದ ವಜಾ: ಕಾಂಗ್ರೆಸ್‌ ಆಕ್ಷೇಪ

Published:
Updated:

ಜೈಪುರ: ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ(ಎನ್‌ಎಂಎಂಲ್‌) ಸೊಸೈಟಿಯಿಂದ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ವಜಾ ಮಾಡಿರುವುದಕ್ಕೆ ಪಕ್ಷವು ಆಕ್ಷೇಪ ವ್ಯಕ್ತಪಡಿಸಿದೆ.

ಎನ್‌ಎಂಎಂಎಲ್‌ ಸೊಸೈಟಿಯನ್ನು ಪುನರ್‌ರಚಿಸಿರುವ ಕೇಂದ್ರ ಸರ್ಕಾರವು, ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಂ ರಮೇಶ್‌ ಮತ್ತು ಕರಣ್‌ ಸಿಂಗ್‌ ಅವರನ್ನು ಕೈಬಿಟ್ಟಿದೆ.

ಆದರೆ, ಹಿರಿಯ ಪತ್ರಕರ್ತ ರಜತ್‌ ಶರ್ಮಾ, ಪ್ರಸೂನ್‌ ಜೋಶಿ ಅವರನ್ನು ಸೊಸೈಟಿಗೆ ಸೇರಿಸಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೊಸೈಟಿಯ ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಉಪಾಧ್ಯಕ್ಷರಾಗಿದ್ದಾರೆ ಎಂದು ಕೇಂದ್ರದ ಅಧಿಸೂಚನೆ ತಿಳಿಸಿದೆ.

ಪ್ರತಿಕ್ರಿಯಿಸಿ (+)