ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ ವಿದ್ಯಾರ್ಥಿ ವೇತನ: ನೆರವು ಹೆಚ್ಚಳ

60:40ರ ಅನುಪಾತದಲ್ಲಿ ಹಣಕಾಸು ವೆಚ್ಚದ ಹಂಚಿಕೆ; ಆರ್ಥಿಕ ವ್ಯವಹಾರ ಕುರಿತ ಸಂಪುಟ ಸಮಿತಿಗೆ ಪ್ರಸ್ತಾವ
Last Updated 7 ಜುಲೈ 2019, 17:53 IST
ಅಕ್ಷರ ಗಾತ್ರ

ನವದೆಹಲಿ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಭರಿಸಲು ‘ಹಣಕಾಸು ಹಂಚಿಕೆಯ ಮಾದರಿ’ಯ ನೂತನ ಪ್ರಸ್ತಾವವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರೂಪಿಸಿದೆ.

ಇದರ ಪ್ರಕಾರ, ವಿದ್ಯಾರ್ಥಿವೇತನದ ಮೊತ್ತವನ್ನು ಕೇಂದ್ರ, ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಭರಿಸಲಿವೆ. ಆರ್ಥಿಕ ವ್ಯವಹಾರ ಕುರಿತು ಸಂಪುಟ ಸಮಿತಿಯ ಪರಾಮರ್ಶೆಗೆ ಈ ಕುರಿತ ಪ್ರಸ್ತಾವವನ್ನು ಕಳುಹಿಸಲಾಗಿದೆ.

ಇದುವರೆಗೂ ಗರಿಷ್ಠ ಮೊತ್ತವನ್ನು ಆಯಾ ರಾಜ್ಯಗಳೇ ಭರಿಸುತ್ತಿದ್ದವು. ಸಚಿವಾಲಯ ಈಗ ಯೋಜನೆಯನ್ನು ಪುನರ್‌ರಚಿಸಿದ್ದು, ಇದರ ಪ್ರಕಾರ, ಕೇಂದ್ರ ಹೆಚ್ಚಿನ ವೆಚ್ಚವನ್ನು ಭರಿಸಲಿದೆ.

ನೂತನ ವ್ಯವಸ್ಥೆಯು ವಿದ್ಯಾರ್ಥಿವೇತನ ಯೋಜನೆಗೆ ಹಣಕಾಸು ಹರಿವಿನ ಖಾತರಿಯನ್ನು ನೀಡಲಿದೆ. ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಹೊರೆಯನ್ನು ಕುಗ್ಗಿಸಲಿದೆ. ಸಚಿವಾಲಯ ಮೊದಲು ಹಣಕಾಸು ಹಂಚಿಕೆ ಅನುಪಾತವನ್ನು 75:25 ಎಂದು ನಿಗದಿಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT