ಶುಕ್ರವಾರ, ನವೆಂಬರ್ 22, 2019
27 °C

ಅಪಹೃತ ಐವರು ಭಾರತೀಯರ ಬಿಡುಗಡೆ

Published:
Updated:

ನವದೆಹಲಿ: ‘ಮ್ಯಾನ್ಮಾರ್‌ನಲ್ಲಿ ಅರಕನ್‌ ಸೇನೆಯ ಬಂಡಾಯ ಗುಂಪು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಐವರು ಭಾರತೀಯರು, ಸಂಸದ ಹಾಗೂ ಮ್ಯಾನ್ಮಾರ್‌ನ ಐದು ಮಂದಿಯನ್ನು ಬಿಡುಗಡೆ ಮಾಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.

‘ಐವರು ಭಾರತೀಯರು ಸೇರಿದಂತೆ ಹತ್ತು ಜನರು ಭಾನುವಾರ ಪಲೆತ್ವಾದಿಂದ ರಾಖೇನ್‌ ಜಿಲ್ಲೆಗೆ ಬರುವಾಗ ಅರಕನ್‌ ಸೇನೆ  ಅಪಹರಿಸಿತ್ತು. ಭಾರತ ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಬಿಡುಗಡೆ ಸಾಧ್ಯವಾಯಿತು’ ಎಂದು ಹೇಳಿಕೆ ತಿಳಿಸಿದೆ.

ಅಪಹೃತರಾಗಿದ್ದ ಭಾರತೀಯರು ಮ್ಯಾನ್ಮಾರ್‌ನಲ್ಲಿನ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿದ್ದರು. ಅರಕನ್‌ ಸೇನೆ ವಶದಲ್ಲಿ ಇರುವಾಗಲೇ ಒಬ್ಬ ಭಾರತೀಯ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಿಕೆ ತಿಳಿಸಿದೆ.

ಸ್ಥಳೀಯ ರಾಖೇನ್‌ ಬೌದ್ಧ ಧರ್ಮಿಯರಿಗೆ ಹೆಚ್ಚಿನ ಸ್ವಾಯತ್ತತೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಅರಕನ್ ಸೇನೆಯು ಯುನೈಟೆಡ್‌ ಲೀಗ್‌ ಆಫ್‌ ಅರಕನ್‌ (ಯುಎಲ್‌ಎ) ಹೆಸರಿನಲ್ಲಿ ಸ್ಥಾಪನೆಯಾಗಿದೆ. 

 

 

ಪ್ರತಿಕ್ರಿಯಿಸಿ (+)