ಸುಕನ್ಯಾ ಸಮೃದ್ಧಿ: ಕನಿಷ್ಠ ಠೇವಣಿ ₹250ಕ್ಕೆ ಇಳಿಕೆ

7

ಸುಕನ್ಯಾ ಸಮೃದ್ಧಿ: ಕನಿಷ್ಠ ಠೇವಣಿ ₹250ಕ್ಕೆ ಇಳಿಕೆ

Published:
Updated:

ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳಲ್ಲಿ ವಾರ್ಷಿಕ ಜಮೆ ಮಾಡಬೇಕಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಸರ್ಕಾರ ₹ 250ಕ್ಕೆ ಇಳಿಸಿದೆ. ಇದರಿಂದಾಗಿ ಈ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ಹೆಣ್ಣು ಮಕ್ಕಳಿಗಾಗಿ ಉಳಿತಾಯ ಮಾಡುವ ಈ ಯೋಜನೆಯಲ್ಲಿ ಪೋಷಕರು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ₹1,000 ಮೊತ್ತವನ್ನು ಖಾತೆಗೆ ಜಮೆ ಮಾಡಬೇಕಿತ್ತು. ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳು–2016ಕ್ಕೆ ಸರ್ಕಾರ ತಿದ್ದುಪಡಿ ಮಾಡಿದೆ.

ಸಣ್ಣ ಉಳಿತಾಯ ಖಾತೆಗಳಿಗೆ ನೀಡುವಂತೆಯೇ ಸುಕನ್ಯಾ ಸಮೃದ್ಧಿ ಖಾತೆಗಳ ಠೇವಣಿಗೂ ಸರ್ಕಾರ ಬಡ್ಡಿ ನೀಡುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಯಮದ ಪ್ರಕಾರ ತ್ರೈಮಾಸಿಕ ಅವಧಿಗೆ ಬಡ್ಡಿ ದರ ಪರಿಷ್ಕರಿಸುತ್ತದೆ. ಠೇವಣಿ ಹಣಕ್ಕೆ ಆಯಾಯ ವರ್ಷದ ಆದಾಯ ತೆರಿಗೆಯಲ್ಲಿ ಸೆಕ್ಷನ್‌ 80ಸಿ ಅಡಿ ತೆರಿಗೆ ವಿನಾಯಿತಿಯೂ ಇದೆ.

10 ವರ್ಷದೊಳಗಿನ ಯಾವುದೇ ಹೆಣ್ಣುಮಗುವಿನ ಹೆಸರಿನಲ್ಲಿ ಅವರ ಹೆತ್ತವರು ಅಥವಾ ಪಾಲಕರು ಅಂಚೆ ಕಚೇರಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಆ ಮಗು 18 ವರ್ಷ ತುಂಬಿದ ನಂತರ ಖಾತೆಯಲ್ಲಿರುವ ಹಣ ಪಡೆಯಬಹುದು.

ಅಂಕಿ ಅಂಶ

1.26 ಕೋಟಿ -ಹೆಣ್ಣುಮಕ್ಕಳ ಪೋಷಕರು 2017ರವರೆಗೆ ತೆರೆದಿರುವ ಖಾತೆಗಳು

₹19,183 ಕೋಟಿ -ಇದುವರೆಗೆ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಜಮೆಯಾದ ಒಟ್ಟು ಠೇವಣಿ

ಶೇ 8.1 -ಖಾತೆಯಲ್ಲಿ ಠೇವಣಿ ಇಡುವ ಹಣಕ್ಕೆ ಜುಲೈನಿಂದ ಸೆಪ್ಟೆಂಬರ್‌ಗೆ ಸರ್ಕಾರ ನೀಡುವ ಬಡ್ಡಿ ದರ

2015 -ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ಬಂದ ವರ್ಷ

21 ವರ್ಷಗಳು -ಖಾತೆಯು ಆರಂಭಿಸಿದ ದಿನದಿಂದ ಚಾಲ್ತಿಯಲ್ಲಿರುವ ಅವಧಿ

14 ವರ್ಷಗಳು -ಖಾತೆ ತೆರೆದ ದಿನದಿಂದ ಹಣ ಠೇವಣಿ ಮಾಡಬೇಕು

 

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !