ಕಪ್ಪುಹಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು 2019ರಲ್ಲಿ ಪಡೆಯಲಿದ್ದೇವೆ: ಗೋಯಲ್‌

7

ಕಪ್ಪುಹಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು 2019ರಲ್ಲಿ ಪಡೆಯಲಿದ್ದೇವೆ: ಗೋಯಲ್‌

Published:
Updated:
ಪೀಯೂಷ್‌ ಗೋಯಲ್‌

ನವದೆಹಲಿ: ಕಪ್ಪುಹಣ ಅಥವಾ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ಅಂಕಿ ಅಂಶಗಳನ್ನು ಸಿಟ್ಜರ್‌ಲೆಂಡ್‌ನಿಂದ 2019ರ ಆರ್ಥಿಕ ವರ್ಷದ ಅಂತ್ಯದಲ್ಲಿ ಪಡೆದುಕೊಳ್ಳಲಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಶುಕ್ರವಾರ ಹೇಳಿದ್ದಾರೆ.

ಸ್ವಿಸ್‌ ರಾಷ್ಟ್ರೀಯ ಬ್ಯಾಂಕ್‌ ತನ್ನ ರಾಷ್ಟ್ರೀಯ ವರದಿ ಪ್ರಕಟಿಸಿದ ಒಂದು ದಿನದ ನಂತರ ಈ ಹೇಳಿಕೆ ನೀಡಿದ್ದಾರೆ. ವರದಿ ಪ್ರಕಾರ, ಸ್ವಿಸ್‌ ಬ್ಯಾಂಕ್‌ಗಳಿಗೆ 2017ರಲ್ಲಿ ವಿದೇಶಿಯರಿಂದ ಹರಿದುಬಂದ ಒಟ್ಟು ಹಣದ ಪ್ರಮಾಣದಲ್ಲಿ ಶೇ. 3 ರಷ್ಟು (₹ 100 ಲಕ್ಷ ಕೋಟಿ) ಏರಿಕೆಯಾಗಿದೆ. ಭಾರತೀಯರು ಜಮೆ ಮಾಡಿರುವ ಹಣದ ಪ್ರಮಾಣ ಶೇ. 50 ರಷ್ಟು(₹ 7000 ಕೋಟಿ) ಏರಿಕೆಯಾಗಿದೆ ಎನ್ನಲಾಗಿದೆ. 

ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ಗೋಯಲ್‌, ‘ಭಾರತ–ಸ್ವಿಟ್ಜರ್‌ಲೆಂಡ್‌ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ, 01 ಜನವರಿ 2018ರಿಂದ ಹಣಕಾಸು ವರ್ಷ ಮುಗಿಯುವವರೆಗಿನ ಎಲ್ಲ ಅಂಕಿ ಅಂಶಗಳು ಲಭ್ಯವಿರುವಂತೆ ಮಾಡಲಾಗುವುದು. ಹಾಗಾಗಿ, ಅದನ್ನು ಕಪ್ಪುಹಣ ಅಥವಾ ಅಕ್ರಮ ವರ್ಗಾವಣೆ ಎಂದು ಏಕೆ ಅರ್ಥೈಸಬೇಕು?’ ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !