ಮಂಗಳವಾರ, ನವೆಂಬರ್ 19, 2019
23 °C

ಶ್ರೀನಗರ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ : ಓರ್ವ ಸಾವು, 25 ಮಂದಿಗೆ ಗಾಯ

Published:
Updated:
 Maulana Azad Road in Srinagar

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಮೌಲಾನ ಆಜಾದ್ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ ನಡೆದಿದೆ.  ಸೋಮವಾರ ಮಧ್ಯಾಹ್ನ ಈ ದಾಳಿ ನಡೆದಿದ್ದು ಇದರಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ. 25 ಮಂದಿಗೆ ಗಾಯಗಳಾಗಿವೆ.

ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ಈ ದಾಳಿ ನಡೆದಿದ್ದು, ಗಾಯಗೊಂಡವರು ಸ್ಥಳೀಯರಾಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಇದರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ರಾಯಿಟರ್ಸ್ ವರದಿ ಉಲ್ಲೇಖಿಸಿರುವುದಾಗಿ  ಹಿಂದೂಸ್ತಾನ್ ಟೈಮ್ಸ್ ಹೇಳಿದೆ.

ಉತ್ತರ ಕಾಶ್ಮೀರದ ಸೋಪೋರ್‌ನಲ್ಲಿ ಅಕ್ಟೋಬರ್  28ರಂದು ಗ್ರೆನೇಡ್ ದಾಳಿ ನಡೆದಿದ್ದು 20 ಮಂದಿ ಗಾಯಗೊಂಡಿದ್ದರು.
 

 

 

 

ಪ್ರತಿಕ್ರಿಯಿಸಿ (+)