ಜಿಎಸ್‌ಟಿ ಸಂಗ್ರಹ ₹ 94,442 ಕೋಟಿ

7

ಜಿಎಸ್‌ಟಿ ಸಂಗ್ರಹ ₹ 94,442 ಕೋಟಿ

Published:
Updated:

ನವದೆಹಲಿ: ಜಿಎಸ್‌ಟಿ ಸಂಗ್ರಹವು ಸೆಪ್ಟೆಂಬರ್‌ನಲ್ಲಿ ಅಲ್ಪ ಏರಿಕೆ ಕಂಡಿದೆ. ಆಗಸ್ಟ್‌ನಲ್ಲಿ ₹ 93,690 ಕೋಟಿ ಇತ್ತು. ಸೆಪ್ಟೆಂಬರ್‌ನಲ್ಲಿ ₹ 94,442 ಕೋಟಿಗೆ ಏರಿಕೆಯಾಗಿದೆ.

ಒಟ್ಟು ಮೊತ್ತದಲ್ಲಿ ಕೇಂದ್ರ ಜಿಎಸ್‌ಟಿ ₹ 15,318 ಕೋಟಿ, ರಾಜ್ಯ ಜಿಎಸ್‌ಟಿ ₹ 21,061 ಕೋಟಿ ಹಾಗೂ ಸಮಗ್ರ ಜಿಎಸ್‌ಟಿ ₹ 50,070 ಕೋಟಿ ಇದೆ. ಸೆಸ್‌ ರೂಪದಲ್ಲಿ ₹ 7,993 ಕೋಟಿ ಸಂಗ್ರಹವಾಗಿದೆ. ಈ ತಿಂಗಳಿನಲ್ಲಿ 67 ಲಕ್ಷ ರಿಟರ್ನ್‌ಗಳು ಲ್ಲಿಕೆಯಾಗಿವೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಆಗಸ್ಟ್‌ನಲ್ಲಿ ನಡೆದಿರುವ ಖರೀದಿ ಮತ್ತು ಮಾರಾಟ ಚಟುವಟಿಕೆಗಳ ಆಧಾರದ ಮೇಲೆ ಸೆಪ್ಟೆಂಬರ್‌ ತಿಂಗಳ ವರಮಾನ ಸಂಗ್ರಹ ನಿರ್ಧಾರವಾಗುತ್ತದೆ.

‘ಕೆಲವು ಸರಕುಗಳ ತೆರಿಗೆ ದರ ತಗ್ಗಿಸಿದ ಬಳಿಕವೂ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಮುಂದಿನ ತಿಂಗಳುಗಳಲ್ಲಿ ತೆರಿಗೆ ಸಂಗ್ರಹ ಇನ್ನಷ್ಟು ಹೆಚ್ಚಳಗೊಳ್ಳುವುದಕ್ಕೆ ಇದು ಮುನ್ಸೂಚನೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !