ಭಾನುವಾರ, ಡಿಸೆಂಬರ್ 15, 2019
25 °C

ಪ್ರಮಾಣ ಪತ್ರ ಪಡೆದ ಕಟ್ಟಡಕ್ಕೆ ಜಿಎಸ್‌ಟಿ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಮಗಾರಿ ಪೂರ್ಣಗೊಂಡು ಪ್ರಮಾಣ ಪತ್ರ ಪಡೆದಿರುವ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ನಿರ್ಮಿಸಿರುವ ವಸತಿ ಯೋಜನೆಗಳಲ್ಲಿ ಮನೆ ಖರೀಸುವವರಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ನಿರ್ಮಾಣ ಹಂತದಲ್ಲಿರುವ ಅಥವಾ ವಾಸಕ್ಕೆ ಸಿದ್ಧವಿರುವ ವಸತಿ ಯೋಜನೆಗಳ ಮಾರಾಟಕ್ಕೆ ಜಿಎಸ್‌ಟಿ ಅನ್ವಯವಾಗಲಿದೆ. ಈ ಯೋಜನೆಗಳಲ್ಲಿನ ಮನೆಗಳ ಮಾರಾಟ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ ಸಿಕ್ಕಿರುವುದಿಲ್ಲ. ಹೀಗಾಗಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. 

ಕೈಗೆಟುಕುವ ಬೆಲೆಗೆ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆಗಳಿಗೆ ಶೇ 8ರಷ್ಟು ಜಿಎಸ್‌ಟಿ ನೀಡಬೇಕು. ಇದನ್ನು ಬಿಲ್ಡರ್‌ಗಳ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ನೊಂದಿಗೆ ಹೊಂದಾಣಿಕೆ ಮಾಡಲಾಗುವುದು. ಹೀಗೆ ಹೊಂದಾಣಿಕೆ ಆದ ಬಳಿಕ ’ಐಟಿಸಿ’ ಮೊತ್ತ ಹೆಚ್ಚಿಗೆ ಇರುವುದರಿಂದ ಬಹುತೇಕ ಸಂದರ್ಭಗಳಲ್ಲಿ ಬಿಲ್ಡರ್‌ಗಳು ನಗದು ರೂಪದಲ್ಲಿ ಜಿಎಸ್‌ಟಿ ಪಾವತಿಸುವ ಪ್ರಮೇಯವೇ ಬರುವುದಿಲ್ಲ ಎಂದಿದೆ.

ಲಾಭವನ್ನು ವರ್ಗಾಯಿಸಿ: ಜಿಎಸ್‌ಟಿ ಜಾರಿಯಾದ ಬಳಿಕ  ವಸತಿ ಸಂಕೀರ್ಣ ಅಥವಾ ಫ್ಲ್ಯಾಟ್‌ಗಳ ಯೋಜನಾ ವೆಚ್ಚದಲ್ಲಿಯೂ ಏರಿಕೆಯಾಗಿಲ್ಲ. ಹೀಗಾಗಿ ಬೆಲೆ ತಗ್ಗಿಸುವ ಅಥವಾ  ಕಂತಿನ ಹಣ ತಗ್ಗಿಸುವ ಮೂಲಕ ಗ್ರಾಹಕರಿಗೆ ತೆರಿಗೆ ಲಾಭವನ್ನು ವರ್ಗಾಯಿಸುವಂತೆ ಬಿಲ್ಡರ್‌ಗಳಿಗೆ ಸೂಚನೆ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು