ಸರಗಳ್ಳರಿಗೆ ಶಿಕ್ಷೆ ಅವಧಿ ಹೆಚ್ಚಳ

7
ಗುಜರಾತ್‌ ಸರ್ಕಾರದಿಂದ ಕಠಿಣ ಕ್ರಮ

ಸರಗಳ್ಳರಿಗೆ ಶಿಕ್ಷೆ ಅವಧಿ ಹೆಚ್ಚಳ

Published:
Updated:

ಅಹಮದಾಬಾದ್: ಸರಗಳ್ಳರಿಗೆ 7ರಿಂದ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅನುವಾಗುವಂತೆ ಐಪಿಸಿ ಸೆಕ್ಷನ್‌ 379ಕ್ಕೆ ತಿದ್ದುಪಡಿ ತರಲು ಗುಜರಾತ್‌ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ.

ಈಗ ಈ ಸೆಕ್ಷನ್‌ ಅಡಿ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಇದರಿಂದ, ಸರ ಮತ್ತು ಪರ್ಸ್‌ ಕಳವು ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜ ಸೋಮವಾರ ಹೇಳಿದ್ದಾರೆ.

ಹೊಸ ನಿಯಮದ ಪ್ರಕಾರ, ಸರ ಅಥವಾ ‍ಪರ್ಸ್‌ ಕಳ್ಳತನ ಸಾಬೀತಾದರೆ ಕನಿಷ್ಠ 7ರಿಂದ ಗರಿಷ್ಠ 10 ವರ್ಷದವರೆಗೆ ಕಠಿಣ ಶಿಕ್ಷೆ, ₹25 ಸಾವಿರ ದಂಡ, ಸಂತ್ರಸ್ತರನ್ನು ಗಾಯಗೊಳಿಸಿದರೆ ಹೆಚ್ಚುವರಿಯಾಗಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !