ಸೋಮವಾರ, ನವೆಂಬರ್ 18, 2019
29 °C

ಗುಜರಾತ್‌ ಉಗ್ರ ನಿಗ್ರಹ ಮಸೂದೆಗೆ ರಾಷ್ಟ್ರಪತಿ ಅಂಕಿತ

Published:
Updated:
Prajavani

ಅಹಮದಾಬಾದ್: ಭಾರಿ ವಿವಾದ ಹುಟ್ಟುಹಾಕಿರುವ ‘ಗುಜರಾತ್‌ ಉಗ್ರರ ನಿಗ್ರಹ ಮಸೂದೆ’ಗೆ (ಜಿಸಿಟಿಒಸಿ) ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಂಕಿತ ಹಾಕಿದ್ದಾರೆ.

ಗಾಂಧಿನಗರದಲ್ಲಿ ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಗೃಹ ಖಾತೆಯ ರಾಜ್ಯ ಸಚಿವ ಪ್ರದೀಪ್‌ಸಿನ್ಹಾ ಜಡೇಜಾ, ‘ಉಗ್ರರ ನಿಗ್ರಹ, ಸಂಘಟಿತ ಅಪರಾಧ ಪ್ರಕರಣಗಳು, ಪೊಂಜಿ ಸ್ಕೀಂ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಪೊಲೀಸರಿಗೆ ಹೆಚ್ಚು ಬಲ ಬರಲಿದೆ ಎಂದರು.

ಮುಖತಃ ನೀಡಲಾದ ಹೇಳಿಕೆಗಳು, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡಲಾದ ಹೇಳಿಕೆಗಳು ಹಾಗೂ ತಪ್ಪೊಪ್ಪಿಗ ಹೇಳಿಕೆಗಳ ಧ್ವನಿಮುದ್ರಿಕೆಗಳನ್ನು ಸಹ ಸಾಕ್ಷ್ಯಗಳನ್ನಾಗಿ ಪರಿಗಣಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ, ರಾಷ್ಟ್ರಪತಿಗಳು ಅಂಕಿತ ಸಿಗುವುದು ವಿಳಂಬವಾಯಿತು.

‘ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ದೂರವಾಣಿ ಮೂಲಕ ನಡೆಯುವ ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಂಡು, ಅದನ್ನೇ ಸಾಕ್ಷ್ಯ ಎಂದು ಹಾಜರುಪಡಿಸಲು ಈ ನೂತನ ಕಾಯ್ದೆ ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)