ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡದಲ್ಲಿ ಗುಂಡಿನ ಚಕಮಕಿ: ಎಸ್ಐ ಸಾವು, ನಾಲ್ಕು ಮಾವೋವಾದಿಗಳ ಎನ್‌ಕೌಂಟರ್

Last Updated 9 ಮೇ 2020, 4:25 IST
ಅಕ್ಷರ ಗಾತ್ರ

ರಾಜನಂದ್‌ಗಾಂವ್(ಛತ್ತೀಸಗಡ): ಮಾವೋವಾದಿಗಳುಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸಬ್‌‌ಇನ್ಸ್‌ಪೆಕ್ಟರ್, ನಾಲ್ಕು ಮಂದಿ ಮಾವೋವಾದಿ ನಕ್ಸಲರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ರಾತ್ರಿ ಸುಮಾರು 10.30ರ ಸಮಯದಲ್ಲಿ ಇಲ್ಲಿನ ಮಾನ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ದೋನಿ ಗ್ರಾಮದ ಸಮೀಪ ಕಾಡಿನಲ್ಲಿ ಈ ಘಟನೆ ನಡೆದಿದೆ.ಕಾಡಿನಲ್ಲಿ ಮಾವೋವಾದಿಗಳು ಇರುವಮಾಹಿತಿ ಪಡೆದ ಮಾವೋವಾದಿ ನಿಗ್ರಹ ಪೊಲೀಸ್ ಪಡೆ ದಾಳಿ ನಡೆಸಿದಾಗ ಪರಸ್ಪರ ಗುಂಡಿನ ಚಕಮಕಿ ನಡೆದಿದೆ.

ಮಾವೋವಾದಿಗಳು ಕಾಡಿನಲ್ಲಿ ಬೀಡುಬಿಟ್ಟಿರುವ ಸಣ್ಣದೊಂದು ಮಾಹಿತಿ ಸಿಕ್ಕಿತ್ತು. ಕೂಡಲೆ ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ಪಡೆಯೊಂದನ್ನು ರಚಿಸಿ ಕೂಡಲೆ ಅವರನ್ನು ಬಂಧಿಸುವ ಕಾರ್ಯಾಚರಣೆ ಆರಂಭಿಸಲಾಯಿತು.ಆದರೆ, ಪರ್ದೋನಿ ಕಾಡನ್ನು ಪೊಲೀಸ್ ಪಡೆ ಸುತ್ತುವರಿದಿತ್ತು. ಆ ಸಮಯದಲ್ಲಿ ಮಾವೋವಾದಿಗಳು ಪೊಲೀಸರತ್ತ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಪ್ರತಿಯಾಗಿಪೊಲೀಸರೂ ಕೂಡ ಈ ಕಡೆಯಿಂದಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಎಸ್.ಕೆ.ಶರ್ಮ ಅವರು ಮೃತಪಟ್ಟಿದ್ದಾರೆ ಎಂದು ರಾಜನಂದಗಾಂವ್ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಜಿತೇಂದ್ರ ಶುಕ್ಲಾ ಹೇಳಿದ್ದಾರೆ.

ಎಸ್.ಕೆ.ಶರ್ಮ ಸುರ್ಗುಜಾ ಜಿಲ್ಲೆಯ ನಿವಾಸಿಯಾಗಿದ್ದಾರೆ.ಎನ್ ಕೌಂಟರ್ ನಲ್ಲಿ ಮೃತಪಟ್ಟವರನ್ನು ಮಾವೋವಾದಿ ಪಾರ್ಟಿಯ ವಿಭಾಗೀಯ ಸಮಿತಿ ಸದಸ್ಯ ಅಶೋಕ, ಮಾವೋವಾದಿ ಪಾರ್ಟಿಯ ಮತ್ತೊಬ್ಬ ಪದಾಧಿಕಾರಿ ಕೃಷ್ಣ, ಇಬ್ಬರು ಮಹಿಳೆಯರಾದ ಸರಿತಾ, ಪ್ರಮೀಳಾ ಇವರು ಪಾರ್ಟಿಯಕಿರಿಯ ಸದಸ್ಯರು ಎಂದು ಎಸ್‌ಪಿ ತಿಳಿಸಿದ್ದಾರೆ.

ಅವರಿಂದ ಎಕೆ 47 ರೈಫಲ್, ಒಂದು ಎಸ್ ಎಲ್ ಆರ್, 315 ರೈಫಲ್, ಸಜೀವ ಗುಂಡುಗಳು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಾವೋವಾದಿಗಳು ಮೂರು ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸಗಡ ಸೇರಿ ಒಂದು ರೆಡ್ ಕಾರಿಡಾರ್ ನಿರ್ಮಾಣ ಮಾಡಿಕೊಂಡಿದ್ದು, ಇಲ್ಲಿ ತಮ್ಮ ಕಾರ್ಯಾಚರಣೆ ನಡೆಸಿದ್ದರು.

ಈ ಪ್ರದೇಶಗಳಲ್ಲಿ ಹೊಸದಾಗಿ ಸದಸ್ಯರನ್ನು ಪಾರ್ಟಿಗೆ ಸೇರಿಸಿಕೊಳ್ಳುವುದು ಸೇರಿದಂತೆ ಇತರೆ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದವು. ಈ ಕುರಿತು ಹಲವು ದಾಖಲೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ 180 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ, ತಮ್ಮ ಹಿಡಿತ ಸಾಧಿಸಲು ತೊಡಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT