ವ್ಯಸನ ಮುಕ್ತಿಗೊಳಿಸಲು ಬಂದವರನ್ನೇ ಕೊಂದ ಬಾಲಕ

7

ವ್ಯಸನ ಮುಕ್ತಿಗೊಳಿಸಲು ಬಂದವರನ್ನೇ ಕೊಂದ ಬಾಲಕ

Published:
Updated:

ನವದೆಹಲಿ: ಮಾದಕ ವಸ್ತು ಸೇವನೆ ಚಟಕ್ಕೆ ಬಲಿಯಾಗಿದ್ದ ಬಾಲಕನನ್ನು ವ್ಯಸನ ಮುಕ್ತಿ ಕೇಂದ್ರಕ್ಕೆ ಕರೆತರಲು ಹೋಗಿದ್ದ ಸ್ವಯಂ ಸೇವಾ ಸಂಸ್ಥೆಯ ಉದ್ಯೋಗಿಯೊಬ್ಬರು, ಅದೇ ಬಾಲಕನಿಂದ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಖ್ಯಾಲ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಲಕ್ಷ್ಮಿ ನಗರದಲ್ಲಿನ ಸಂಸ್ಥೆಗೆ ಮಹಿಳೆಯೊಬ್ಬರು ಕರೆ ಮಾಡಿ, ತಮ್ಮ ಮಗನನ್ನು ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸುವಂತೆ ಮನವಿ ಮಾಡಿದ್ದರು. ಅದರಂತೆ ಸಂಸ್ಥೆಯ ಪ್ರಕಾಶ್, ನಿಶಿಧ್‌ ಮತ್ತು ಹರ್ಷ ಚೌಧರಿ ಎಂಬುವವರು ಅವರ ಮನೆಗೆ ತೆರಳಿದ್ದರು.‌

ಬಾಲಕ ಸಿಬ್ಬಂದಿಯೊಂದಿಗೆ ತೆರಳಲು ಪ್ರತಿರೋಧ ಒಡ್ಡಿದ. ಆದರೂ ಅವರು ತಮ್ಮೊಂದಿಗೆ ಕರೆದೊಯ್ಯಲು ಆತನನ್ನು ಬಲವಂತವಾಗಿ ಕಾರಿನತ್ತ ಎಳೆದುತರುತ್ತಿದ್ದರು. ಈ ಸಂದರ್ಭದಲ್ಲಿ ಜೇಬಿನಿಂದ ಚಾಕು ತೆಗೆದ ಬಾಲಕ, ಹರ್ಷ ಚೌಧರಿ ಅವರ ಎದೆಗೆ ಚುಚ್ಚಿದ. ಪ್ರಜ್ಞಾಹೀನರಾದ ಚೌಧರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !