ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ಬಸ್ ಟಿಕೆಟ್‌ಗಳಲ್ಲಿ ಹಜ್, ಜೆರುಸಲೆಂ ತೀರ್ಥಯಾತ್ರೆ ಜಾಹೀರಾತು

Last Updated 23 ಆಗಸ್ಟ್ 2019, 12:49 IST
ಅಕ್ಷರ ಗಾತ್ರ

ಹೈದರಾಬಾದ್: ಆಂಧ್ರ ಪ್ರದೇಶದ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ತಿರುಪತಿ ದೇವಾಲಯಕ್ಕಿರುವ ಟಿಕೆಟ್‌ನ ಹಿಂಭಾಗದಲ್ಲಿ ಹಜ್ ಮತ್ತು ಜೆರುಸಲೇಂ ತೀರ್ಥಯಾತ್ರೆಯ ಜಾಹೀರಾತು ಇದೆ.

ಬುಧವಾರ ಪ್ರಯಾಣಿಕರೊಬ್ಬರು ಇದನ್ನು ಅಲ್ಲಿನ ಪ್ರಾದೇಶಿಕ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸರ್ಕಾರದ ಅಲ್ಪ ಸಂಖ್ಯಾತರ ಇಲಾಖೆ ನೀಡಿದ ಜಾಹೀರಾತು ಅದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚುನಾವಣೆಗೆ ಮುನ್ನ ತೆಲುಗುದೇಶಂ ಆಡಳಿತವಿದ್ದ ಕಾಲದಲ್ಲಿಈ ಟಿಕೆಟ್‌ಗಳನ್ನು ಮುದ್ರಿಸಲಾಗಿತ್ತು. ಇದು ನೆಲ್ಲೂರ್ ಮತ್ತು ಕಡಪಾ ಮಾರ್ಗದಲ್ಲಿ ಸಾಗುವ ಬಸ್‌ಗಳಿಗಿರುವುದಾಗಿದೆ. ಇದು ತಿರುಮಲ-ತಿರುಪತಿ ಮಾರ್ಗದಲ್ಲಿ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಂಧ್ರದ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ಹೇಳಿದ್ದಾರೆ.

ಬಿಜೆಪಿ ಆಕ್ರೋಶ

ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಿಂದೂ ಧರ್ಮದವರಲ್ಲ.ಧರ್ಮಗಳಲ್ಲಿ ಅವರಿಗೆ ನಂಬಿಕೆ ಇಲ್ಲ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿಯ ವಿವಾದಿತ ಶಾಸಕ ರಾಜಾ ಸಿಂಗ್ ಈಗಾಗಲೇ ಈ ವಿಷಯದ ಬಗ್ಗೆ ವಿಡಿಯೊ ಮೂಲಕ ದನಿಯೆತ್ತಿದ್ದಾರೆ

ಕಳೆದ ವಾರ ಜಗನ್ ಅಮೆರಿಕ ಹೋಗಿದ್ದಾಗ ಅಲ್ಲಿದೀಪ ಬೆಳಗಲು ನಿರಾಕರಿಸಿದ್ದರು. ಕಾರ್ಯಕ್ರಮದಲ್ಲಿ ದೀಪ ಬೆಳಗುವುದು ಹಿಂದೂ ಸಂಪ್ರದಾಯವಾಗಿದ್ದರಿಂದಜಗನ್ ಹಿಂದೂ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT