ಗುರುವಾರ , ಅಕ್ಟೋಬರ್ 17, 2019
22 °C

ಹಜ್‌ ಯಾತ್ರೆ: 10ರಿಂದ ನೋಂದಣಿ ಪ್ರಕ್ರಿಯೆ ಆರಂಭ

Published:
Updated:

ನವದೆಹಲಿ: 2020ರ ಹಜ್‌ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಅರ್ಜಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್‌ ಆಗಿರಲಿದ್ದು, ಅ. 10ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್‌ ಅಬ್ಬಾಸ್‌ ನಖ್ವಿ ತಿಳಿಸಿದ್ದಾರೆ. 

ಆಂಧ್ರಪ್ರದೇಶದ ವಿಜಯವಾಡದಲ್ಲಿ ನೂತನ ಕೇಂದ್ರ ತೆರೆಯಲಾಗಿದ್ದು, 22 ವಿಮಾನ ನಿಲ್ದಾಣಗಳಿಂದ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 2 ಲಕ್ಷ ಯಾತ್ರಾರ್ಥಿಗಳು ಪ್ರವಾಸ ಕೈಗೊಳ್ಳುವ ನಿರೀಕ್ಷೆ ಇದ್ದು, 500 ವಿಮಾನಗಳು ಕರೆದೊಯ್ಯಲಿವೆ ಎಂದು ಅವರು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 

ಅರ್ಜಿ ಸಲ್ಲಿಸಲು ನವೆಂಬರ್‌ 1 ಕೊನೆಯ ದಿನವಾಗಿದ್ದು, ಮೊಬೈಲ್ ಆ್ಯಪ್‌ ಮೂಲಕವೂ ಸಲ್ಲಿಸಬಹುದಾಗಿದೆ. ಅಲ್ಲದೆ, ‘ಹಜ್‌ ಗ್ರೂಪ್‌ ಆರ್ಗನೈಸರ್ಸ್’ (ಎಚ್‌ಜಿಒ) ಮೂಲಕ 1ರಿಂದ ಡಿಸೆಂಬರ್‌ 1ರವರೆಗೆ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮದೀನಾದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಪ್ರತಿ ಯಾತ್ರಾರ್ಥಿಗೂ ₹ 3,000 ಉಳಿತಾಯ ಆಗಲಿದೆ. ಜಿಎಸ್‌ಟಿಯನ್ನು ಶೇ 18ರಿಂದ 5ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ. 

Post Comments (+)