ಹನುಮಾನ್ ದೇವಸ್ಥಾನದ ಅರ್ಚಕರಿಗೆ ಪೊಲೀಸ್‌ ರಕ್ಷಣೆ

7

ಹನುಮಾನ್ ದೇವಸ್ಥಾನದ ಅರ್ಚಕರಿಗೆ ಪೊಲೀಸ್‌ ರಕ್ಷಣೆ

Published:
Updated:

ಮುಜಾಫ್ಫರ್‌ನಗರ: ದಲಿತ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಹನುಮಾನ್ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಹಾಗೂ ಪೂಜಾ ಕಾರ್ಯಕೈಗೊಂಡಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಅರ್ಚಕರ ಮನವಿ ಮೇರೆಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಹನುಮಾನ್ ಒಬ್ಬ ದಲಿತ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ ನಂತರ ದೇವಸ್ಥಾನಕ್ಕೆ ಆಗಮಿಸಿದ ದಲಿತರು ಬುಧವಾರ ಪ್ರಾರ್ಥನೆ ಸಲ್ಲಿಸಿದರು. 

ನಂತರ ‘ದಲಿತ ಹನುಮಾನ್ ಮಂದಿರ, ಹನುಮಾನ್‌ ಚೌಕ ಮುಜಾಫ್ಫರ್‌ನಗರ’ ಎಂದು ಬರೆದಿದ್ದ ಬ್ಯಾನರ್‌ ಪ್ರದರ್ಶಿಸಿದರು. ಇದರಿಂದ ವಿಚಲಿತರಾದ ಅರ್ಚಕರು ಪೊಲೀಸರಿಗೆ ಕರೆ ಮಾಡಿ ಭದ್ರತೆಗೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !