ಉಪವಾಸಕ್ಕೆ ಸ್ಥಳ ಕೋರಿ ‘ಪ್ರತಿಭಟನೆ’

7

ಉಪವಾಸಕ್ಕೆ ಸ್ಥಳ ಕೋರಿ ‘ಪ್ರತಿಭಟನೆ’

Published:
Updated:
Deccan Herald

ಅಹಮದಾಬಾದ್: ಅನಿರ್ದಿಷ್ಟಾವಧಿ ಉಪವಾಸ ನಡೆಸುವುದಕ್ಕೆ ಅಧಿಕೃತ ಅನುಮತಿ ನೀಡದ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಭಾನುವಾರ ಪ್ರತಿಭಟನೆ ನಡೆಸುವುದಾಗಿ ಪಾಟಿದಾರ್ ಮೀಸಲಾತಿ ಆಂದೋಲನದ ಮುಖಂಡ ಹಾರ್ದಿಕ್ ಪಟೇಲ್‌ ಘೋಷಿಸಿದ್ದಾರೆ.

‘ರೈತರು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಾವು ನಡೆಸುವ ಹೋರಾಟಕ್ಕೆ ಸ್ಥಳ ನೀಡದೆ, ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿಂದ ಅಸಾಂವಿಧಾನಿಕವಾಗಿ ವರ್ತಿಸುತ್ತಿದೆ. ಇದನ್ನು ವಿರೋಧಿಸಿ ನಿಕೋಲ್‌ನಲ್ಲಿರುವ ಪಾರ್ಕಿಂಗ್ ಝೋನ್‌ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಹಾರ್ದಿಕ್ ತಿಳಿಸಿದ್ದಾರೆ.

ಪಾಟಿದಾರ್ ಮೀಸಲಾತಿಗೆ ಆಗ್ರಹಿಸಿ ನಡೆಸಿದ ಆಂದೋಲದನ 3ನೇ ವರ್ಷಾಚರಣೆ ಸಲುವಾಗಿ ಆಗಸ್ಟ್ 25ರಂದು ಅನಿರ್ದಿಷ್ಟಾವಧಿ ಉಪವಾಸ ಆರಂಭಿಸುವುದಾಗಿ ಹೇಳಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !