ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಪರೀಕ್ಷೆ: ದೇಶದ ಮೊದಲ ಮೊಬೈಲ್ ಲ್ಯಾಬೊರೇಟರಿಗೆ ಹರ್ಷವರ್ಧನ್ ಚಾಲನೆ

Last Updated 18 ಜೂನ್ 2020, 11:34 IST
ಅಕ್ಷರ ಗಾತ್ರ

ನವದೆಹಲಿ:ಗ್ರಾಮೀಣ ಹಾಗೂ ತಲುಪಲು ಸಾಧ್ಯವಾಗದ ಪ್ರದೇಶಗಳಲ್ಲಿ ಕೋವಿಡ್–19 ಸೋಂಕು ಪರೀಕ್ಷೆ ನಡೆಸುವ ಸಲುವಾಗಿ ದೇಶದ ಮೊದಲ ಮೊಬೈಲ್‌ ಲ್ಯಾಬೊರೇಟರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಗುರುವಾರ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು,ಪರೀಕ್ಷಾ ಸೌಲಭ್ಯಗಳನ್ನು ದೂರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಖಚಿತಪಡಿಸುವ ಸಲುವಾಗಿ ಈಲ್ಯಾಬೊರೇಟರಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

‘ನಾವು ಫೆಬ್ರವರಿಯಲ್ಲಿ ಒಂದು ಪ್ರಯೋಗಾಲಯ ತೆರೆಯುವುದರೊಂದಿಗೆ ಕೋವಿಡ್‌–19 ವಿರುದ್ಧ ಹೋರಾಟ ಆರಂಭಿಸಿದ್ದೆವು. ಇಂದು ದೇಶದಾದ್ಯಂತ 953 ಪ್ರಯೋಗಾಲಯಗಳನ್ನು ಹೊಂದಿದ್ದೇವೆ. ಇದರಲ್ಲಿ 699 ಸರ್ಕಾರಿ ಪ್ರಯೋಗಾಲಯಗಳು’ ಎಂದು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12,881 ಕೋವಿಡ್–19 ಪ್ರಕರಣಗಳು ವರದಿಯಾಗಿದ್ದು, ಸದ್ಯ ಭಾರತದಲ್ಲಿ 3,66,946 ಜನರಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. 12 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT