ಸೋಮವಾರ, ಜನವರಿ 27, 2020
26 °C

ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ ಶ್ರಿಂಗ್ಲಾ ನೇಮಕ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ ಶ್ರಿಂಗ್ಲಾ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಶ್ರಿಂಗ್ಲಾ ಅವರು ವಿಜಯ್‌ ಕೇಶವ್‌ ಗೋಖಲೆ ಅವರಿಂದ ಜ. 29ರಂದು ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಸಂಪುಟ ನೇಮಕಾತಿ ಸಮಿತಿಯು ಶ್ರಿಂಗ್ಲಾ ಅವರನ್ನು ನೇಮಕ ಮಾಡಿರುವುದಾಗಿ ಸಿಬ್ಬಂದಿ ಮತ್ತು ತರಬೇತಿ ವಿಭಾಗ  (ಡಿಒಪಿಟಿ) ಹೇಳಿದೆ. 

ಗೋಖಲೆ ಅವರ ಕಾರ್ಯಾವಧಿ 2020ರ ಜನವರಿ 28ಕ್ಕೆ ಮುಗಿಯಲಿದೆ. ಶ್ರಿಂಗ್ಲಾ ಅವರು 1984ನೇ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್‌) ಅಧಿಕಾರಿಯಾಗಿದ್ದು, ಬಾಂಗ್ಲಾದೇಶ, ಥಾಯ್ಲೆಂಡ್‌, ಫ್ರಾನ್ಸ್‌ನಲ್ಲಿನ ಭಾರತದ ರಾಯಭಾರ ಕಚೇರಿಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು