ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಮಲಪ್ಪುರಂ ಬಂದ್: ಮನೆಯಿಂದ ಹೊರ ಬರದಂತೆ ಜನರಿಗೆ ಪ್ರತಿಭಟನಾಕಾರರ ಎಚ್ಚರಿಕೆ

Last Updated 17 ನವೆಂಬರ್ 2018, 9:22 IST
ಅಕ್ಷರ ಗಾತ್ರ

ಮಲಪ್ಪುರಂ: ಪ್ರತಿಭಟನಾಕಾರರು ಇಲ್ಲಿನ ಅನೇಕ ರಸ್ತೆಗಳನ್ನು ಬಂದ್‌ ಮಾಡಿದ್ದು, ಮನೆ ಬಿಟ್ಟು ಹೊರ ಬರದಂತೆ ಜನರಿಗೆ ಬೆದರಿಯೊಡ್ಡಿದ್ದಾರೆ. ಹಿಂದೂ ಐಕ್ಯ ವೇದಿ ಹಾಗೂ ಶಬರಿಮಲ ಕರ್ಮ ಸಮಿತಿ ಸದಸ್ಯರುಸೂರ್ಯಾಸ್ತದ ವರೆಗೂ ಬಂದ್‌(ಹರ್ತಾಲ್‌) ಕರೆ ನೀಡಿದ್ದಾರೆ.

ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಬಂಧನ ವಿರೋಧಿಸಿ ಮಲ್ಲಪ್ಪುರಂನಲ್ಲಿ ಶನಿವಾರ ಪ್ರತಿಭಟನೆ ಕಾವೇರಿದೆ. ಬಂದ್‌ ವಿಚಾರ ತಿಳಿಯದ ಅನೇಕರು ತೊಂದರೆ ಅನುಭವಿಸಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿದಿಲ್ಲ ಹಾಗೂ ಜಿಲ್ಲೆಯಾದ್ಯಂತ ಅಂಗಡಿಗಳು ಮುಚ್ಚಿದ್ದು, ವಾಣಿಜ್ಯ–ವಹಿವಾಟು ಸ್ಥಗಿತಗೊಂಡಿದೆ.

ತಿರೂರ್‌ನಲ್ಲಿ ಆಟೋರಿಕ್ಷಾ ಚಾಲಕ ಹಾಗೂ ಬಸ್‌ ಚಾಲಕರ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ. ಹಲವು ಕಡೆ ರಸ್ತೆಗಳು ಬಂದ್‌ ಮಾಡಿದ್ದಾರೆ. ಚಾಲಕರ ಮೇಲೆ ದಾಳಿ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಚಾಲಕರ ಒಕ್ಕೂಟ ಖಂಡಿಸಿದೆ. ದಾಳಿಕೋರರು ಬಸ್‌ ನಿರ್ವಾಹಕನಿಂದ ಹಣ ಮತ್ತು ಮೊಬೈಲ್‌ ಕಸಿದುಕೊಂಡಿರುವುದಾಗಿ ವರದಿಯಾಗಿದೆ. ಬಂದ್ ಇರುವುದು ತಿಳಿಯದೆ ಬಸ್ ತಿರೂರ್‌ ತಲುಪಿತ್ತು.

ಇಂದು ಬೆಳಿಗ್ಗೆ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.ಮನೆಯಿಂದ ಹೊರಬರದಂತೆ ಜನರಿಗೆ ಪ್ರತಿಭಟನಾಕಾರರು ತಾಕೀತು ಮಾಡಿದ್ದಾರೆ.

ಶಬರಿಮಲೆಗೆ ತೆರಳದಂತೆ ಪೊಲೀಸರು ಮಾಡಿದ ಮನವಿ ತಿರಸ್ಕರಿಸಿ ಮುನ್ನಡೆಯಲು ಯತ್ನಿಸಿದಹಿಂದೂ ಐಕ್ಯ ವೇದಿಕೆಯಕೆ.ಪಿ. ಶಶಿಕಲಾ ಅವರನ್ನುಶುಕ್ರವಾರ ಮಧ್ಯರಾತ್ರಿ 1.30ಕ್ಕೆಬಂಧಿಸಲಾಗಿದೆ. ಅವರ ಬಂಧನ ವಿರೋಧಿಸಿರುವಬಲಪಂಥೀಯ ಸಂಘಟನೆಗಳು ಕೇರಳ ಬಂದ್‌ಗೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT