ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

48ಗಂಟೆಗಳ ರಕ್ಷಣಾ ಕಾರ್ಯಾಚರಣೆ: ಕೊಳವೆಬಾವಿಗೆ ಬಿದ್ದ ಮಗು ರಕ್ಷಣೆ

Last Updated 22 ಮಾರ್ಚ್ 2019, 20:33 IST
ಅಕ್ಷರ ಗಾತ್ರ

ಹಿಸಾರ್‌, ಹರಿಯಾಣ: ಸತತ 48 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ 18 ತಿಂಗಳ ಮಗುವನ್ನು ಕೊಳವೆಬಾವಿಯಿಂದ ಸುರಕ್ಷಿತವಾಗಿ ಶುಕ್ರವಾರ ರಕ್ಷಿಸಲಾಗಿದೆ.

ಹಿಸಾರ್‌ ಜಿಲ್ಲೆಯ ಬಲ್ಸಾಮಂದ್‌ ಗ್ರಾಮದಲ್ಲಿ ಆಟವಾಡುತ್ತಿದ್ದಾಗ ನದೀಮ್‌ ಎನ್ನುವ ಮಗು 60 ಅಡಿ ಆಳದ ಕೊಳವೆಬಾವಿಯಲ್ಲಿ ಬುಧವಾರ ಸಂಜೆ ಬಿದ್ದಿತ್ತು.

ಸೇನಾ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್‌) ಸಿಬ್ಬಂದಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

‘ಅತ್ಯಂತ ಕಠಿಣ ರಕ್ಷಣಾ ಕಾರ್ಯಾಚರಣೆ ಇದಾಗಿತ್ತು. ಮಗು ಸಂಪೂರ್ಣವಾಗಿ ಸುರಕ್ಷಿತವಾಗಿದೆ’ ಎಂದು ಜಿಲ್ಲಾಧಿಕಾರಿ ಅಶೋಕ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ರಾತ್ರಿ ವೇಳೆ ಬಳಸುವ ಅತ್ಯಾಧುನಿಕ ಕ್ಯಾಮೆರಾಗಳನ್ನು ಮಗುವಿನ ಚಲನವಲನವನ್ನು ಗಮನಿಸಲು ಕಾರ್ಯಾಚರಣೆ ವೇಳೆ ಉಪಯೋಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT