ಪ್ರಧಾನಿ, ರಾಷ್ಟ್ರಪತಿಗೆ ನೇರವಾಗಿ ದೂರು: ಕೋರ್ಟ್‌ ಅಸಮಾಧಾನ

7

ಪ್ರಧಾನಿ, ರಾಷ್ಟ್ರಪತಿಗೆ ನೇರವಾಗಿ ದೂರು: ಕೋರ್ಟ್‌ ಅಸಮಾಧಾನ

Published:
Updated:
Deccan Herald

ಮುಂಬೈ: ಇನ್ನೊಬ್ಬರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಪ್ರಧಾನಿ, ರಾಷ್ಟ್ರಪತಿ ಇಲ್ಲವೇ ಮುಖ್ಯಮಂತ್ರಿಗೆ ನೇರವಾಗಿ ಪತ್ರ ಬರೆದು ಅದನ್ನು ತಿಳಿಸುವ ಪದ್ಧತಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕಾನೂನು ಪ್ರಕ್ರಿಯೆಗಳನ್ನು ಉಪೇಕ್ಷಿಸಿ, ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ನೇರವಾಗಿ ಪತ್ರ ಬರೆಯುವ ಪ್ರವೃತ್ತಿ ಸಾರ್ವಜನಿಕವಾಗಿ ಪ್ರಚಾರ ಪಡೆಯುವ ತಂತ್ರ ಎಂದು ನ್ಯಾಯಮೂರ್ತಿ ಎಸ್‌.ಎಸ್‌.ಶಿಂಧೆ ಮತ್ತು ಮೃದುಲಾ ಭಾಟ್ಕರ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ಪುಣೆ ಜಿಲ್ಲೆಯಲ್ಲಿ ಈ ವರ್ಷದ ಜನವರಿಯಲ್ಲಿ ನಡೆದ ಭೀಮಾ– ಕೊರೆಗಾಂವ್‌ ಹಿಂಸಾಚಾರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಅರ್ಜಿಗಳನ್ನು ಉಲ್ಲೇಖಿಸಿ ಕೋರ್ಟ್‌ ಹೀಗೆ ಹೇಳಿದೆ.

ಹಿಂಸಾಚಾರ ಸಂತ್ರಸ್ತ ಎಂದು ಹೇಳಿಕೊಂಡು ಅರ್ಜಿ ಸಲ್ಲಿಸಿರುವ ಪುಣೆ ನಿವಾಸಿ ಸತೀಶ್‌ ಗಾಯಕ್‌ವಾಡ್‌ ಎಂಬುವವರು, ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ರೀತಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್‌ ‌ಮಲಿಕ್ ಚೌಧರಿ ಎಂಬುವವರು, ರಾಜ್ಯ ಸಿಐಡಿ ವಿಭಾಗದಿಂದ ತನಿಖೆ ನಡೆಸಬೇಕು ಎಂದು ಪ್ರತ್ಯೇಕ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಚೌಧರಿ ಅವರು ಇದಕ್ಕೂ ಮೊದಲು ಪ್ರಧಾನಿ, ರಾಷ್ಟ್ರಪತಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದುದನ್ನು ವಿಚಾರಣೆ ವೇಳೆ ನ್ಯಾಯಪೀಠ ಪ್ರಸ್ತಾಪಿಸಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !