ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌, ವರ್ಮಾ ವಜಾ ಪ್ರಕರಣ: ಮೋದಿ ನಿದ್ದೆ ಮಾಡುವುದಿಲ್ಲ– ರಾಹುಲ್ ಗಾಂಧಿ

Last Updated 11 ಜನವರಿ 2019, 4:57 IST
ಅಕ್ಷರ ಗಾತ್ರ

ನವದೆಹಲಿ:ಸಿಬಿಐ ನಿರ್ದೇಶಕಅಲೋಕ್‌ ವರ್ಮಾ ವಜಾ ಹಾಗೂ ರಫೇಲ್‌ ಹಗರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಈ ಎರಡು ಪ್ರಕರಣಗಳಿಂದಾಗಿ ಮೋದಿ ನಿದ್ದೆ ಮಾಡುವುದಿಲ್ಲ ಎಂದು ರಾಹುಲ್‌ ಹೇಳಿದ್ದಾರೆ.

ಅಲೋಕ್‌ ವರ್ಮಾ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿಗೆ ಈಗ ಭಯ ಉಂಟಾಗಿದ್ದು, ಅವರು ನಿದ್ದೆ ಮಾಡಲಾರರು, ರಕ್ಷಣಾ ಇಲಾಖೆಯಿಂದ ₹30 ಸಾವಿರ ಕೋಟಿ ಕದ್ದು ಅದನ್ನು ಅನಿಲ್‌ ಅಂಬಾನಿಗೆ ನೀಡಿದ್ದಾರೆ.ಅವರು ಹೇಳಿದ ಸುಳ್ಳಿನಲ್ಲೇ ಈಗ ಬಂಧಿಯಾಗಿದ್ದಾರೆ ಎಂದು ರಾಹುಲ್ ಟ್ವೀಟ್‌ ಮಾಡಿದ್ದಾರೆ.

ವರ್ಮಾ ಅವರನ್ನು ಸರ್ಕಾರ ರಜೆಯ ಮೇಲೆ ಮನೆಗೆ ಕಳುಹಿಸಿತ್ತು. ಆದರೆ,ಸುಪ್ರೀಂ ಕೋರ್ಟ್‌ ಸೀಮಿತ ಅಧಿಕಾರ ನೀಡಿ ಅವರನ್ನು ಮತ್ತೆ ಸಿಬಿಐ ಹುದ್ದೆಗೆ ಕಳುಹಿಸಿತ್ತು. ಆದಾಗ್ಯೂಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ವರ್ಮಾ ಅವರನ್ನು ವಜಾ ಮಾಡಿದೆ.ಅಲೋಕ್‌ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾ ಮಾಡುವುದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಅಲೋಕ್‌ ವರ್ಮಾ ಅವರನ್ನು ಆತುರದಲ್ಲಿವಜಾ ಮಾಡಿದ್ದು ಯಾಕೆ? ವರ್ಮಾ ಅವರಿಗೆ ಸಮಿತಿಯ ಮುಂದೆ ತಮ್ಮ ವಾದ ಮಂಡಿಸಲು ಯಾಕೆ ಅವಕಾಶ ನೀಡಿಲ್ಲ? ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮೂಲಕ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ರಫೇಲ್‌ ಎಂದು ಅವರೇ ಉತ್ತರ ಸಹ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT