ಲ್ಯಾನ್ಸ್‌ ನಾಯಕ್ ನಜೀರ್‌ ಅಹ್ಮದ್‌ ವಾನಿಗೆ ಅಶೋಕ ಚಕ್ರ

7
ಮೊದಲು ಉಗ್ರಗಾಮಿ, ನಂತರ ಹುತಾತ್ಮರಾಗಿದ್ದ ಯೋಧ

ಲ್ಯಾನ್ಸ್‌ ನಾಯಕ್ ನಜೀರ್‌ ಅಹ್ಮದ್‌ ವಾನಿಗೆ ಅಶೋಕ ಚಕ್ರ

Published:
Updated:

ನವದೆಹಲಿ: ಭಯೋತ್ಪಾದಕನಾಗಿ, ನಂತರ ಪರಿವರ್ತನೆಗೊಂಡು ಸೇನೆಗೆ ಸೇರಿ ಹುತಾತ್ಮರಾಗಿದ್ದ ಲ್ಯಾನ್ಸ್‌ ನಾಯಕ್‌ ನಜೀರ್‌ ಅಹ್ಮದ್‌ ವಾನಿ ಅವರಿಗೆ ಮರಣೋತ್ತರವಾಗಿ ’ಅಶೋಕ ಚಕ್ರ‘ ಗೌರವವನ್ನು ಘೋಷಿಸಲಾಗಿದೆ. ಇದು ಸೇನೆಯ ಶಾಂತಿಕಾಲದ ಅತ್ಯುನ್ನತ ಸೇನಾ ಗೌರವವಾಗಿದೆ. ಯುದ್ಧ ಭೂಮಿಯಲ್ಲಿ ಅಪ್ರತಿಮ ಸಾಹಸ, ಕೆಚ್ಚೆದೆಯ ಹೋರಾಟ ನಡೆಸಿ ಹುತಾತ್ಮರಾದ ಯೋಧರಿಗೆ ಈ ಗೌರವ ನೀಡಲಾಗುತ್ತದೆ.

38 ವರ್ಷದ ವಾನಿ ಅವರು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ಅಶ್‌ಮುಜಿಯವರು. ಮೊದಲಿಗೆ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರಾಗಿ ಸೇನೆಯ ವಿರುದ್ಧವೇ ಹೋರಾಡುತ್ತಿದ್ದರು. 2004ರಲ್ಲಿ ಮನಃಪರಿವರ್ತನೆಗೊಂಡು, ಭಾರತೀಯ ಸೇನೆ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಶೋಪಿಯಾನ್‌ ಜಿಲ್ಲೆಯ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕೆಚ್ಚೆದೆಯ ಹೋರಾಟವನ್ನು ಪ್ರದರ್ಶಿಸಿ, ಹುತಾತ್ಮರಾಗಿದ್ದರು.

ಹುತಾತ್ಮರಾಗುವ ಮುನ್ನ ಅಸಾಧಾರಣ ಹೋರಾಟ ನಡೆಸಿದ್ದ ’ವಾನಿಗೆ ಸೇನಾ ಮೆಡಲ್‌‘ ನೀಡಿ ಕೂಡ ಗೌರವಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 42

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !