ಬಿಹಾರ: ಬಿಸಿಗಾಳಿಗೆ 44 ಬಲಿ

ಶುಕ್ರವಾರ, ಜೂಲೈ 19, 2019
24 °C
ದಶಕದಲ್ಲೆ ದಾಖಲೆ ತಾಪಮಾನ: ಶಾಲೆಗಳಿಗೆ ರಜೆ ಘೋಷಣೆ

ಬಿಹಾರ: ಬಿಸಿಗಾಳಿಗೆ 44 ಬಲಿ

Published:
Updated:

ಪಟ್ನಾ: ಬಿಹಾರದ ಜಿಲ್ಲೆಗಳಲ್ಲಿ ಶನಿವಾರ ಉಷ್ಣಾಂಶ 45.8 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಬಿಸಿಗಾಳಿಯ ಪರಿಣಾಮ 44 ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ.

ಔರಂಗಬಾದ್‌, ನವಾಡಾ ಮತ್ತು ಗಯಾ ಜಿಲ್ಲೆಗಳಲ್ಲಿ ಕ್ರಮವಾಗಿ 22, 2 ಹಾಗೂ 20 ಮಂದಿ ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಮೃತರ ಕುಟುಂಬಕ್ಕೆ ತಲಾ ₹ 4 ಲಕ್ಷ ಪರಿಹಾರ ಘೋಷಿಸಿದ್ದು, ಮುನ್ನೆಚ್ಚರಿಕೆ ಕ್ರಮಗಳ ಜೊತೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಹತ್ತು ವರ್ಷದಲ್ಲೇ ಅತ್ಯಧಿಕ ತಾಪಮಾನ ಶನಿವಾರ ದಾಖಲಾಗಿದೆ. ಗಯಾ ಮತ್ತು ಬಾಗಲ್ಪುರ ಜಿಲ್ಲೆಗಳಲ್ಲಿ  ಕ್ರಮವಾಗಿ 45.2, 41.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಬಿಸಿಲ ಝಳ ಈ ತಿಂಗಳ 19ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಪಟ್ನಾ ಜಿಲ್ಲಾಧಿಕಾರಿ ಕುಮಾರ್‌ ರವಿ ಮಾಹಿತಿ ನೀಡಿದ್ದಾರೆ.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !