ಭಾನುವಾರ, ಸೆಪ್ಟೆಂಬರ್ 15, 2019
26 °C

ಮುಂಬೈ: ಎರಡು ದಿನ ಭಾರಿ ಮಳೆ ಸಂಭವ

Published:
Updated:

ಮುಂಬೈ: ಮುಂಬೈ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಭಾನುವಾರ ಮತ್ತು ಸೋಮವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜು ಮಾಡಿದೆ.

ಶನಿವಾರ ಬೆಳಿಗ್ಗೆ ಅಂತ್ಯಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 70 ಮಿ.ಮೀ ಮಳೆ ಸುರಿದಿರುವುದು ಕೊಲಾಬಾ ಮಾಪನ ಕೇಂದ್ರದಲ್ಲಿ ದಾಖಲಾಗಿದೆ. ಇದು, ಸಾಂತಾಕ್ರೂಜ್ ಕೇಂದ್ರದಲ್ಲಿ ದಾಖಲಾಗಿದ್ದಕ್ಕಿಂತಲೂ ಅಧಿಕ ಎಂದು ಹೇಳಿದೆ.

ಮುಂದಿನ ಎರಡು ದಿನ ಧಾರಾಕಾರ ಮಳೆ ಸುರಿಯುವ ಸಂಭವವಿದೆ ಎಂದು ಐಎಂಡಿ ಅಧಿಕಾರಿ ವಿಶ್ವಂಭರ್‌ ಸಿಂಗ್‌ ಹೇಳಿದ್ದಾರೆ.

ಚರ್ಚ್‌ಗೇಟ್‌ ಮತ್ತು ಧನು ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದೆ. ಯಾವುದೇ ದೂರು ದಾಖಲಾಗಿಲ್ಲ ಎಂದು ಪಶ್ಚಿಮ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಮಿಥಿ ನದಿಯಲ್ಲಿ ನೀರಿನ ಹರಿವು ಏರಿಕೆ ಹಾಗೂ ಹಳಿಗಳು ಜಲಾವೃತವಾಗಿದ್ದರಿಂದ ಕೇಂದ್ರ ರೈಲ್ವೆ ವ್ಯಾಪ್ತಿಯಲ್ಲಿನ ಹಾರ್ಬರ್‌ ಮತ್ತು ಪಶ್ಚಿಮ ಮಾರ್ಗಗಳಲ್ಲಿ ವಿವಿಧ ರೈಲುಗಳ ಸಂಚಾರ ಬುಧವಾರ ವ್ಯತ್ಯಯವಾಗಿತ್ತು. ಶುಕ್ರವಾರ ಬಹುತೇಕ ಸಹಜ ಸ್ಥಿತಿಗೆ ಮರಳಿತ್ತು.

Post Comments (+)