ನೆರೆ ಸಂತ್ರಸ್ತರನ್ನು ಬೋಟ್ ಹತ್ತಿಸಲು ಬೆನ್ನು ನೀಡಿದ ಜೈಸಲ್: ವೈರಲ್ ವಿಡಿಯೊ

7

ನೆರೆ ಸಂತ್ರಸ್ತರನ್ನು ಬೋಟ್ ಹತ್ತಿಸಲು ಬೆನ್ನು ನೀಡಿದ ಜೈಸಲ್: ವೈರಲ್ ವಿಡಿಯೊ

Published:
Updated:

ವೆಂಗರ (ಮಲಪ್ಪುರಂ): ರಕ್ಷಣಾ ಕಾರ್ಯದ ವೇಳೆ ರಬ್ಬರ್ ಬೋಟ್ ನಲ್ಲಿ ಹತ್ತಲು ಕಷ್ಟ ಎಂದು ಹಿಂಜರಿದ ಮಹಿಳೆಯರಿಗೆ ಧೈರ್ಯ ನೀಡಿ, ಬೆನ್ನು ಬಾಗಿಸಿ ನೀರಿನಲ್ಲಿ ಕುಳಿತು ಇನ್ನು ನನ್ನ ಬೆನ್ನ ಮೇಲೆ ಕಾಲಿಟ್ಟು ಬೋಟ್ ಹತ್ತಿ ಎಂದ ಯುವಕನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.

ಬೆನ್ನ ಮೇಲೆ ಕಾಲಿಟ್ಟು ಹತ್ತುವಂತೆ ಹೇಳಿದ ಆ ಯುವಕ ಹೆಸರು ಜೈಸಲ್ ಕೆ.ಪಿ. ಇಲ್ಲಿನ ತಾನೂರ್ ಎಂಬಲ್ಲಿ ಮೀನುಗಾರನಾಗಿದ್ದಾರೆ ಜೈಸಲ್.

ನೀರಿನಲ್ಲಿ  ಬಾಗಿ ಕುಳಿತು ಬೆನ್ನು ನೀಡಿ ಹತ್ತಿಕೊಳ್ಳಿ ಎಂದು ವಯಸ್ಸಾದ ಮಹಿಳೆಯೊಬ್ಬರಿಗೆ ಹೇಳಿದಾಗ, ಚಪ್ಪಲಿ ಹಾಕಿಕೊಂಡೇ ಆಕೆ ಆತನ ಬೆನ್ನ ಮೇಲೆ ಕಾಲಿಟ್ಟು ಬೋಟ್ ಹತ್ತಿದ್ದಾರೆ. ಆ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು, ಅವರೂ ಮನುಷ್ಯರೇ, ಕಲ್ಲು ಅಲ್ಲ. ನೀವು ಹುಷಾರು ಎಂದು ಹೇಳಿದಾಗ ಸರದಿ ಸಾಲಿನಲ್ಲಿದ್ದ ಇನ್ನೊಬ್ಬ ಮಹಿಳೆ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಬೋಟ್ ಹತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ಈ ವಿಡಿಯೊ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬರಹ ಇಷ್ಟವಾಯಿತೆ?

 • 46

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !