ತಮ್ಮ ಹೆಸರಿಗೆ ಬರೆದಿದ್ದ 1 ಎಕರೆ ಜಮೀನನ್ನು ಪರಿಹಾರ ನಿಧಿಗೆ ನೀಡಿದ ರೈತನ ಮಕ್ಕಳು

7

ತಮ್ಮ ಹೆಸರಿಗೆ ಬರೆದಿದ್ದ 1 ಎಕರೆ ಜಮೀನನ್ನು ಪರಿಹಾರ ನಿಧಿಗೆ ನೀಡಿದ ರೈತನ ಮಕ್ಕಳು

Published:
Updated:

ಪಯ್ಯನ್ನೂರ್ (ಕಣ್ಣೂರು):  'ಸರ್, ಅಳಿಲು ಸೇವೆ ಎಂಬುದೊಂದು ಇದೆಯಲ್ಲಾ. ನಮ್ಮ ರಾಜ್ಯದ ಈ ಪರಿಸ್ಥಿತಿಯನ್ನು ನೋಡಿ ಈ ಶಾಲೆಯ ವಿದ್ಯಾರ್ಥಿನಿಯಾದ ನಾನು ಮತ್ತು ನನ್ನ ತಮ್ಮ ಬ್ರಹ್ಮ ಇಬ್ಬರೂ ಸೇರಿ ನಮ್ಮ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಚಿಕ್ಕ ದೇಣಿಗೆಯೊಂದನ್ನು ನೀಡಬಯಸುತ್ತೇವೆ.

ರೈತನಾಗಿರುವ ನಮ್ಮ ಅಪ್ಪ ನಮ್ಮ ಭವಿಷ್ಯಕ್ಕಾಗಿ ನೀಡಿದ್ದ ಆಸ್ತಿಯಿಂದ ಒಂದು ಎಕರೆ ಜಮೀನನ್ನು ನಾವು ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದೇವೆ. ಅಪ್ಪನ ಅನುಮತಿಯನ್ನೂ ಪಡೆದಿದ್ದೇವೆ. ಇನ್ನು ನಾವೇನು ಮಾಡಬೇಕು?'
ಇಂತೀ,
ಸ್ವಾಹ ಮತ್ತು ಬ್ರಹ್ಮ
ಒಂಭತ್ತನೇ ತರಗತಿ 

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರು ನಿವಾಸಿ, ಶೆಣೈ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯ ಪತ್ರ ಇದು. ನೆರೆ ಪೀಡಿತರಿಗೆ ತಮ್ಮಿಂದಾದ ಸಹಾಯವನ್ನು ನೀಡಲು ಮುಂದೆ ಬಂದಿರುವ ಈ ವಿದ್ಯಾರ್ಥಿನಿಯ ನಿರ್ಧಾರಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 39

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !