ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಿಂದಲೂ ಸ್ಪಷ್ಟವಾಗಿ ಕಾಣುತ್ತಿದೆ ‘ಏಕತಾ ಮೂರ್ತಿ’

Last Updated 17 ನವೆಂಬರ್ 2018, 10:02 IST
ಅಕ್ಷರ ಗಾತ್ರ

ನವದೆಹಲಿ:ಅಮೆರಿಕದ ಸ್ವಾತಂತ್ರ್ಯ (ಲಿಬರ್ಟಿ) ಪ್ರತಿಮೆಗಿಂತ ದುಪ್ಪಟ್ಟು ಎತ್ತರವಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತೆಯ ಮೂರ್ತಿ ಬಾಹ್ಯಾಕಾಶದಿಂದಲೂ ಸ್ಪಷ್ಟವಾಗಿ ಕಾಣುತ್ತಿದೆ.

–ಹೀಗೆಂದು ನಾವು ಹೇಳುತ್ತಿಲ್ಲ.ಗುಜರಾತಿನ ನರ್ಮದಾ ಸರೋವರ ದಂಡೆಯ ಮೇಲೆ ನಿರ್ಮಿಸಲಾಗಿರುವ182 ಮೀಟರ್‌ ಎತ್ತರದ ಮೂರ್ತಿಯ ಚಿತ್ರವನ್ನು ಅಮೆರಿಕದ ವಾಣಿಜ್ಯ ಉಪಗ್ರಹ ಜಾಲವಾದ ಪ್ಲಾನೆಟ್‌ ಲ್ಯಾಬ್‌ ಸೆರೆಹಿಡಿದಿದ್ದು, ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

597 ಅಡಿ ಎತ್ತರದಿಂದ ತೆಗೆದಿರುವ ಈ ಚಿತ್ರದಲ್ಲಿ ಪಟೇಲರ ಮೂರ್ತಿ ಮತ್ತು ಪಕ್ಕದಲ್ಲಿಯೇ ಹರಿಯುತ್ತಿರುವ ನರ್ಮದಾ ನದಿಯ ವೈಮಾನಿಕ ನೋಟ ಕಾಣುತ್ತದೆ. ₹2,389 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ 31ರಂದು ಅನಾವರಣಗೊಳಿಸಿದ್ದರು.

ನರ್ಮದಾ ನದಿಯ ‘ಸಾದುಬೆಟ್‌’ ಕಿರುದ್ವೀಪದ 3.2 ಕಿ.ಮೀ ಜಾಗದಲ್ಲಿ ಈ ಮೂರ್ತಿಹಾಗೂ ಮ್ಯೂಸಿಯಂ ನಿರ್ಮಿಸಲಾಗಿದೆ. 250 ಎಂಜಿನಿಯರ್‌ಗಳು ಹಾಗೂ 3,400 ನೌಕರರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಸರ್ದಾರ್‌ ಪಟೇಲ್‌ ಅವರಿಗೆ ಸೇರಿದ ಮ್ಯೂಸಿಯಂ, ವೀಕ್ಷಣಾ ಗ್ಯಾಲರಿ, ಎಸ್ಕಲೇಟರ್‌, ಸೆಲ್ಫೀ ಪಾಯಿಂಟ್‌, ಶಾಪಿಂಗ್‌ ಪಾಯಿಂಟ್‌ಗಳು ಇಲ್ಲಿವೆ. 2013ರ ಅಕ್ಟೋಬರ್‌ 31ರಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.ತಳದಲ್ಲಿ ಮ್ಯಾಪಿಂಗ್‌ ಸೌಕರ್ಯವಿರಲಿದ್ದು, ಪಟೇಲ್‌ ಜೀವನಕ್ಕೆ ಸಂಬಂಧಿಸಿದ ಬೆಳಕು ಮತ್ತು ಧ್ವನಿಯ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಮೂರ್ತಿಯು ಪೂರ್ವಾಭಿಮುಖವಾಗಿದೆ. ನೆರಳಿನ ಪ್ರತಿಬಿಂಬವನ್ನು ಪರಿಶೀಲಿಸಿ, ಮೂರ್ತಿಯ ದಿಕ್ಕನ್ನು ನಿರ್ಧರಿಸಿರುವುದರಿಂದ ಮೂರ್ತಿಯುದಿನದ ಸಾಕಷ್ಟು ಸಮಯ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ ಎನ್ನುತ್ತಾರೆ ನಿರ್ಮಾಣ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT