ಭಾರತೀಯ ಮಹಿಳೆಯರ ಯಶೋಗಾಥೆ ನೆನಪಿಸಿಕೊಂಡ ಹಿಲರಿ ಕ್ಲಿಂಟನ್

7
ಬಡ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ ‘ಸೇವಾ’ ಸಂಸ್ಥೆ: ಹಿಲರಿ ಶ್ಲಾಘನೆ

ಭಾರತೀಯ ಮಹಿಳೆಯರ ಯಶೋಗಾಥೆ ನೆನಪಿಸಿಕೊಂಡ ಹಿಲರಿ ಕ್ಲಿಂಟನ್

Published:
Updated:

ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆಗೆಂದು ಭಾರತಕ್ಕೆ ಬಂದಿದ್ದ ಅಮೆರಿಕ ಮಾಜಿ ವಿದೇಶಾಂಗ ಖಾತೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ 1995ರಲ್ಲಿ ತಾವು ಭೇಟಿಯಾದ ಸಾಧಕಿಯೊಬ್ಬರನ್ನು ನೆನಪಿಸಿಕೊಂಡು ಸ್ಫೂರ್ತಿದಾಯಕ ಕಥನವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಳಾ ಭಟ್ 1972ರಲ್ಲಿ ‘ಸೇವಾ’ (SEWA– Self-Employed Women's Association) ಸಂಸ್ಥೆಯನ್ನು 1972ರಲ್ಲಿ ಆರಂಭಿಸಿದರು. ಈ ಸಂಸ್ಥೆಯು ಈವರೆಗೆ ಬಡ ಮಹಿಳೆಯರಿಗೆ ತರಬೇತಿ ಮತ್ತು ಸಾಲದ ಸೌಲಭ್ಯ ಕಲ್ಪಿಸಿ ಆರ್ಥಿಕ ಸ್ವಾವಲಂಬಿಗಳಾಗಲು ನೆರವು ನೀಡಿದೆ. ಹಿಲರಿ ಕ್ಲಿಂಟನ್ 1995ರಲ್ಲಿ ಅಹಮದಾಬಾದ್‌ನಲ್ಲಿರುವ ‘ಸೇವಾ’ದ ಮುಖ್ಯ ಕಚೇರಿಯಲ್ಲಿ ಭೇಟಿಯಾಗಿದ್ದರು.


ಜೂನ್ 18, 2009ರಲ್ಲಿ ‘ಸೇವಾ’ ಸಂಸ್ಥೆಯ ಇಳಾ ಭಟ್ ಅವರನ್ನು ಭೇಟಿಯಾಗಿದ್ದ ಹಿಲರಿ ಕ್ಲಿಂಟನ್

14 ಸಾವಿರ ಸದಸ್ಯರಿರುವ ಈ ಸಂಸ್ಥೆಯು ದೇಶದಲ್ಲಿ ಒಂದು ಚಳವಳಿಯಾಗಿ ಬೆಳೆಯುತ್ತಿದೆ. ಬಹುತೇಕ ಸದಸ್ಯರು ಅತಿಬಡ ಕುಟುಂಬಗಳ ಹಿನ್ನೆಲೆಯಿಂದ ಬಂದಿದ್ದಾರೆ. ಇವರ ಪೈಕಿ ಹಲವರು ಗಂಡನಿಂದ ದೂರವಾಗಿದ್ದಾರೆ, ಕೆಲವರು ಅಂಗವಿಕಲರು.

ಸಂಘಟನೆಯು ಮಹಿಳೆಯರಿಗೆ ದುಡ್ಡು ಗಳಿಸುವ ಮಾರ್ಗ ತೋರಿ ಸುಮ್ಮನಾಗಿಲ್ಲ. ವ್ಯಾಪಾರದ ಪಾಠ ಕಲಿಸುವ ಮೂಲಕ ಆರ್ಥಿಕ ಸ್ವಾವಲಂಬನೆಯ ಮೂಲ ಅಂಶಗಳನ್ನು ಮನದಟ್ಟು ಮಾಡಿಸಿದೆ. ಈ ಸಾಧನೆ ಗುರುತಿಸಿರುವ ಹಿಲರಿ ಕ್ಲಿಂಟನ್, ‘ಮೈಕ್ರೊಲೋನ್ ಕ್ಷೇತ್ರದಲ್ಲಿ ಇಳಾ ಭಟ್ ಮತ್ತು ಅವರ ‘ಸೇವಾ’ ಸಂಸ್ಥೆ ತಮ್ಮ ಕಾಲಕ್ಕಿಂತ ಮುಂದಿದೆ’ (Ahead of Time) ಎಂದು ಶ್ಲಾಘಿಸಿದ್ದಾರೆ.

ತಮ್ಮೊಡನೆ ಹೇಗೆ ‘ಸೇವಾ’ ಸಂಸ್ಥೆಯ ಸಾವಿರಾರು ಮಹಿಳೆಯರು ತಮ್ಮ ಬದುಕಿನ ಕಥೆಗಳನ್ನು, ಆರ್ಥಿಕ ಸ್ವಾತಂತ್ರ್ಯದ ಅವಕಾಶಗಳನ್ನು ದಕ್ಕಿಸಿಕೊಂಡ ಬಗೆಯನ್ನು ಹಂಚಿಕೊಂಡರು ಎಂಬುದನ್ನು ಹಿಲರಿ ನೆನಪಿಸಿಕೊಂಡಿದ್ದಾರೆ. 2009ರಲ್ಲಿ ಸಂಸ್ಥೆಯ ಸದಸ್ಯರ ಸಂಖ್ಯೆ 10 ಲಕ್ಷ ದಾಟಿತು. ಈಗ (2018ರಲ್ಲಿ) 20 ಲಕ್ಷ ಮೀರಿದೆ. 1995ರಲ್ಲಿ ಮೊದಲ ಬಾರಿಗೆ ಹಿಲರಿ ಅವರನ್ನು ‘ನಾವು ಗೆಲ್ಲಬೇಕು’ ಎನ್ನುವ ಗುಜರಾತಿ ಹಾಡು ಹಾಡಿ ಸ್ವಾಗತಿಸಿದ್ದ ಮಹಿಳೆಯರು ಈ ವರ್ಷವೂ ಮತ್ತೆ ಅದೇ ಹಾಡು ಹಾಡಿ ಮೋಡಿ ಮಾಡಿದರು.

(ಇಳಾ ಭಟ್ ಮತ್ತು ‘ಸೇವಾ’ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು www.sewa.org ವೆಬ್‌ಸೈಟ್ ನೋಡಿ)

‘23 ವರ್ಷಗಳಿಂದ ನಾನು ಇಳಾ ಭಟ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ತಾವು ಕಟ್ಟಿದ ಸಂಸ್ಥೆ ಹೆಮ್ಮರವಾಗಿ ಬೆಳೆದ ಬಗೆಯನ್ನು ಅವರು ನೋಡಿದ್ದಾರೆ. ‘ಸೇವಾ’ದ ಚಟುವಟಿಕೆಗಳು ನನಗೆ ಹೆಮ್ಮೆ ತಂದಿವೆ’ ಎಂದು ಹಿಲರಿ ಹೇಳಿಕೊಂಡಿದ್ದಾರೆ.

‘ಒಬ್ಬರು ಕಾರ್ಖಾನೆಯಲ್ಲಿ ಕೆಲಸ ಮಾಡಬಹುದು, ಮತ್ತೊಬ್ಬರು ಮನೆಯಲ್ಲಿ ಇರಬಹುದು, ಮಗದೊಬ್ಬರು ರಸ್ತೆ ಬದಿ ಮಲಗಬಹುದು. ಎಲ್ಲರಿಗೂ ದೇವರು ಕೊಟ್ಟಿರುವ ಪ್ರತಿಭೆ ಬಳಸಿಕೊಳ್ಳಲು, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಅವಕಾಶ ಸಿಗಬೇಕು. ಸಾಧನೆಯ ವಿಷಯಕ್ಕೆ ಬಂದಾಗ ಬಡವ ಅಥವಾ ಶ್ರೀಮಂತ ಎನ್ನುವುದು ಯಾರಿಗೂ ಒಂದು ಮಿತಿಯಾಗಬಾರದು’ ಎನ್ನುವ ಭಾವುಕ ಸಾಲುಗಳು ಹಿಲರಿ ಅವರ ಪೋಸ್ಟ್‌ನಲ್ಲಿ ಗಮನ ಸೆಳೆಯುತ್ತಿವೆ.

ಹಿಲರಿ ಕ್ಲಿಂಟನ್ ಅವರ ಪೋಸ್ಟ್ ಓದಲು ಇಲ್ಲಿ ಕ್ಲಿಕ್ಕಿಸಿ.

 
 
 
 

 
 
 
 
 
 
 
 
 

Back in 1995, I met a woman named Ela Bhatt in India who was already 20 years in to a revolutionary experiment. In 1972, she started an organization to give women small loans that could help them find fulfillment in their work and contribute to their family’s well-being. It was called the Self-Employed Women's Association, or SEWA.⁣ ⁣ On my first visit to their headquarters in Ahmedabad in 1995, SEWA's 140,000 members included some of the poorest women in India with the least access to education. Some had lived in purdah until their husbands died, became disabled, or left. Many had struggled day to day to support their families. ⁣ ⁣ SEWA offered the women small loans to enable them to earn their own income, taught them how to read, and gave them lessons in running small shops and businesses. We now think of this model as "microloans." Ela and SEWA have always been ahead of their time. ⁣ On that first visit, I'll never forget the sight of thousands of women in every color of sari sharing how SEWA had changed their lives by giving them freedom and opportunity. When we finished talking, the women sang “We Shall Overcome” in Gujarati. ⁣ ⁣ Ela and I stayed in touch, and I've had the chance to see the organization and its impact grow even larger over the years. When I visited SEWA's new retail shop in Mumbai in 2009, the organization had just over a million members. ⁣ ⁣ On a trip to India this week, I had the chance to visit Ela and the women of SEWA in the same place I first visited 23 years ago. Now they're two million members strong and there are two or three generations of SEWA women, all of whom are working to improve not only their own lives but also to lift up their families, their communities, and their country. Once again, when we finished talking, the women sang “We Shall Overcome."⁣ ⁣ Ela’s work is fundamentally about fairness. Every person should have the chance to achieve his or her dreams and make the most of their God-given potential—no matter how rich or poor and no matter whether they work in a factory or a home or on the side of a road. I'm so inspired by these women and I can't wait to see all they continue to overcome and achieve.

Hillary Clinton (@hillaryclinton) ರಿಂದ ಹಂಚಲಾದ ಪೋಸ್ಟ್ ಅವರು ರಂದು

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !