ಹಿಂದಿ ಭಾಷಿಕ ರಾಜ್ಯಗಳೇ ಬಿಜೆಪಿಯ ಶಕ್ತಿ ಕೇಂದ್ರ

ಬುಧವಾರ, ಜೂನ್ 19, 2019
26 °C

ಹಿಂದಿ ಭಾಷಿಕ ರಾಜ್ಯಗಳೇ ಬಿಜೆಪಿಯ ಶಕ್ತಿ ಕೇಂದ್ರ

Published:
Updated:

ನವದೆಹಲಿ: ಕೇಂದ್ರದಲ್ಲಿ ಪುನಃ ಎನ್‌ಡಿಎ ಸರ್ಕಾರ ರಚನೆ ಖಚಿತ ಎಂದು ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಖಚಿತಪಡಿಸಿದ್ದರೂ ಬಿಜೆಪಿಗೆ ಎಷ್ಟು ಸ್ಥಾನಗಳು ಬರಲಿವೆ ಎಂಬ ಬಗ್ಗೆ ವಿಭಿನ್ನ ಅಂಕಿಅಂಶಗಳನ್ನು ಸಮೀಕ್ಷೆಗಳು ನೀಡಿವೆ.

ಸ್ವತಂತ್ರವಾಗಿ ಅಧಿಕಾರ ನಡೆಸುವಷ್ಟು ಸ್ಥಾನಗಳನ್ನು ಬಿಜೆಪಿ ಪಡೆಯಬಲ್ಲದೇ ಎಂಬುದು ಹಿಂದಿ ಭಾಷಿಕ ಐದು ಪ್ರಮುಖ ರಾಜ್ಯಗಳಲ್ಲಿ ಆ ಪಕ್ಷದ ಸಾಧನೆಯನ್ನು ಅವಲಂಬಿಸಿದೆ. ವಿಶೇಷವಾಗಿ ಉತ್ತರಪ್ರದೇಶದಲ್ಲಿ ಆ ಪಕ್ಷದ ಸಾಧನೆಯು ಒಟ್ಟಾರೆ ಸ್ಥಾನ ಗಳಿಕೆಯ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2014ರಲ್ಲಿ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡ ರಾಜ್ಯಗಳ ಒಟ್ಟು 185ರಲ್ಲಿ 165 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿಯೂ ಬಿಹಾರ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯು ವಿರೋಧ ಪಕ್ಷಗಳಿಗಿಂತ ಸಾಕಷ್ಟು ಮುಂದಿದೆ. ಆದರೆ, ಛತ್ತೀಸಗಡದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಸಮಬಲದ ಸ್ಪರ್ಧೆ ನೀಡಿದೆ ಎಂದು ಸಮೀಕ್ಷೆಗಳು ಹೇಳಿವೆ. 

ಉತ್ತರಪ್ರದೇಶದ ವಿಚಾರದಲ್ಲಿ ಸಮೀಕ್ಷೆಗಳು ವಿಭಿನ್ನ ಫಲಿತಾಂಶ ನೀಡಿವೆ. ಇಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಯು ಬಿಜೆಪಿಗೆ ಏಟು ನೀಡಿದೆ. ಜಾತಿ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿದ್ದರಿಂದ ಉತ್ತರಪ್ರದೇಶದ 80 ಸ್ಥಾನಗಳಲ್ಲಿ ಬಿಜೆಪಿಗೆ ಕನಿಷ್ಠ 33ರಿಂದ ಗರಿಷ್ಠ 65 ಸ್ಥಾನ ಲಭ್ಯವಾಗಲಿವೆ ಎಂದು ಸಮೀಕ್ಷೆಗಳು ಹೇಳಿವೆ. ಆದ್ದರಿಂದ ಐದು ಹಿಂದಿ ಭಾಷಿಕ ರಾಜ್ಯಗಳಲ್ಲಿ ಈ ಬಾರಿ 89 ಸ್ಥಾನಗಳು ಮಾತ್ರ ಬಿಜೆಪಿಗೆ ಲಭಿಸಲಿವೆ ಎಂಬುದು ಸಮೀಕ್ಷೆಗಳ ಅಭಿಪ್ರಾಯ. ಒಂದುವೇಳೆ ಸಮೀಕ್ಷೆಗಳು ಅಂದಾಜಿಸಿರುವ ಗರಿಷ್ಠ ಸ್ಥಾನಗಳನ್ನು ಗಣನೆಗೆ ತೆಗೆದುಕೊಂಡರೆ ಬಿಜೆಪಿಗೆ ಈ ರಾಜ್ಯಗಳಿಂದ ಒಟ್ಟಾರೆ 144 ಸ್ಥಾನಗಳು ಲಭಿಸಲಿವೆ.

‘ಹಿಂದಿ ಭಾಷಿಕ ರಾಜ್ಯಗಳಲ್ಲಿ ಆಗಿರುವ ನಷ್ಟವನ್ನು ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ತುಂಬಿ ಕೊಡಲಿವೆ. ಆದ್ದರಿಂದ ಬಿಜೆಪಿಯು ಸರಳ ಬಹುಮತಕ್ಕೆ ಬೇಕಾದ 272ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವುದು ಖಚಿತ’ ಎಂಬ ವಿಶ್ವಾಸದಲ್ಲಿ ಪಕ್ಷದ ಮುಖಂಡರು ಇದ್ದಾರೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಇದರಿಂದಾಗಿ ಈ 3 ರಾಜ್ಯಗಳಲ್ಲಿ ಈ ಬಾರಿ 2014ರ ಸಾಧನೆ ಪುನರಾವರ್ತಿಸಲು ಸಾಧ್ಯವಾಗಲಾರದು ಎಂದು ಚುನಾವಣಾ ತಜ್ಞರು ಆರಂಭದಲ್ಲಿ ಭಾವಿಸಿದ್ದರು. ಆದರೆ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರಗಳ ಸಾಧನೆ ನಿರೀಕ್ಷಿತವಾಗಿಲ್ಲದ್ದರಿಂದ ಮತ್ತು ಬಿಜೆಪಿಯು ಮತ್ತೆ ಮೋದಿ ಹೆಸರಿನಲ್ಲೇ ಮತಯಾಚನೆ ಮಾಡಿದ್ದರಿಂದ ಮತದಾರರು ಪುನಃ ಬಿಜೆಪಿಯತ್ತ ವಾಲುವಂತಾಯಿತು ಎಂದು ಅಭಿಪ್ರಾಯಪಡುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !